ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ಘೋಷಣೆ

9:53 AM, Tuesday, October 1st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Alvasಮೂಡುಬಿದಿರೆ : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ಘೋಷಣೆ ಮತ್ತು ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ವಿದ್ಯಾಗಿರಿಯಲ್ಲಿ ಸೋಮವಾರ ಜರಗಿತು.

ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಸಮಾರಂಭವನ್ನು ಉದ್ಘಾಟಿಸಿ, ಸಮಗ್ರ ಶಿಕ್ಷಣದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ ದೊಂದಿಗೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾದರಿಯಾದ ಬದ್ಧತೆ ತೋರುತ್ತಿದೆ ಎಂದರು.

ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಸಮಾಜಮುಖೀಯಾಗಿ ಶಿಕ್ಷಣ ಸಂಸ್ಥೆ ಹೇಗೆ ಕೆಲಸ ಮಾಡಬಹುದು ಎಂದು ಡಾ| ಆಳ್ವರು ತೋರಿಸಿಕೊಡುತ್ತಿದ್ದಾರೆ. ಇಂಥ ಚಟುವಟಿಕೆಗಳಿಗೆ ಸಮಾಜ, ಸರಕಾರ ಬೆಂಬಲ ನೀಡಬೇಕಾಗಿದೆ ಎಂದರು.

ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಸಂಸ್ಥೆ, ವ್ಯಕ್ತಿಗಳನ್ನು ಮಾಧ್ಯಮಗಳು ಲೋಕಕ್ಕೆ ಪರಿಚಯಿಸಿ, ಸಮಾಜವೂ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮಾಡಬೇಕಾಗಿದೆ ಎಂದರು.

ಪೇಜಾವರ ಶ್ರೀಪಾದರ ಹಿರಿತನದ ಗೋವರ್ಧನ ಗಿರಿ ಟ್ರಸ್ಟ್‌ಗೆ ಆಳ್ವಾಸ್‌ ನಿಂದ ಒಂದು ಲಕ್ಷ ರೂ.ಗಳ ಡಿಡಿ ಯನ್ನು ಸಮರ್ಪಿಸಲಾಯಿತು.

ಆಳ್ವಾಸ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಇತರ ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿರುವ 33.85 ಕೋ.ರೂ. ವಾರ್ಷಿಕ ಉಚಿತ ಕೊಡುಗೆಗಳ ವಿವರ ನೀಡಿದರು.

ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಚಟು ವಟಿಕೆ ವ್ಯಾಪ್ತಿಗೆ ಬರುವ 4,543 ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆಗೆ 13.76 ಕೋ. ರೂ., ಉಚಿತ ವಾಸ್ತವ್ಯಕ್ಕೆ 5.73 ಕೋ.ರೂ., ಉಚಿತ ಭೋಜನಕ್ಕೆ 5.96 ಕೋ.ರೂ., ಸ್ಕೌಟ್‌ ಗೈಡ್ಸ್‌ ಕನ್ನಡ ಭವನ ನಿರ್ಮಾಣಕ್ಕೆ 3.5 ಕೋ.ರೂ., ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗೆ 3.5 ಕೋ.ರೂ., ಎಚ್‌ಐವಿ ಪೀಡಿತರಿಗೆ, ನುಡಿಸಿರಿ ಘಟಕ ನಿರ್ವಹಣೆಗೆ 1.5 ಕೋ.ರೂ., ಕ್ರೀಡಾ ಚಟುವಟಿಕೆಗಳಿಗೆ 1.26 ಕೋ.ರೂ., ಕ್ರೀಡಾಕೂಟ ಗಳ ಆಯೋಜನೆಗೆ 1 ಕೋ.ರೂ. ವಿನಿ ಯೋಗಿಸಲಾಗುತ್ತಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಮುಖ್ಯ ಅತಿಥಿ ಯಾಗಿದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English