ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಶಿಷ್ಟ ಚೇತನ ಗೈಡುಗಳ ನೇಮಕಕ್ಕೆ ಚಿಂತನೆ: ಸಚಿವ ಸಿ. ಟಿ.ರವಿ

7:19 PM, Tuesday, October 1st, 2019
Share
1 Star2 Stars3 Stars4 Stars5 Stars
(No Ratings Yet)
Loading...

 

ct Raviಮಂಗಳೂರು: ನಗರದ ಸಂಘನಿಕೇತನ ದಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ವಿಶಿಷ್ಟ ಮಕ್ಕಳ ಅಂತಾರಾಷ್ಟ್ರೀಯ ಮಟ್ಟದ ೩ ದಿನಗಳ ವಿಶಿಷ್ಟ ಮಕ್ಕಳಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವ ಸಿ.ಟಿ ರವಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶಿಷ್ಟ ಚೇತನರ ಸಂಘದ ಪ್ರಮುಖರ ಬೇಡಿಕೆಯಾದ, ಪ್ರವಾಸಿ ತಾಣಗಳಲ್ಲಿ ವಿಶಿಷ್ಟಚೇತನರನ್ನು ರಾಜ್ಯದ ಪ್ರವಾಸಿ ತಾಣಗಳಲ್ಲಿ ನೇಮಿಸಿಕೊಳ್ಳಬೇಕೆಂದು ಸಚಿವರನ್ನು ಕೇಳಿಕೊಂಡಿದ್ದರು. ವಿಶಿಷ್ಟ ಚೇತನರು ಬೇಟಿ ನೀಡಿದಾಗ ಅಲ್ಲಿಯ ಸ್ಥಳ ಪರಿಚಯ ಮಾಡಿಕೊಳ್ಳಲು ತೊಂದರೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರವಾಸಿ ತಾಣಗಳಲ್ಲಿ ಕಿವುಡರು ಮತ್ತು ಮೂಗರಿಗೆ ಅನುಕೂಲವಾಗುವಂತೆ ವಿಶಿಷ್ಟಚೇತನರನ್ನು ನೇಮಿಸಿಕೊಳ್ಳಬೇಕೆಂದು ಬೇಡಿಕೆಯನ್ನು ಪರಿಶೀಲಿಸುವುದಾಗಿ ಸಚಿವರು ಹೇಳಿದರು.

ಅನಂ ಪ್ರೇಮ್ ಸಮಾಜ ಸೇವಾ ಸಂಸ್ಥೆ, ಮುಂಬೈಯ ಹೆಲನ್ ಕೆಲ್ಲರ ಇನ್ಸಿಟ್ಯೂಟ್ ಫಾರ್ ಡೀಫ್ ಅಂಡ್ ಡೀಫ್ ಬ್ಲೈಂಡ್ ಸಂಸ್ಥೆ ಮತ್ತು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ ನೇತೃತ್ವದಲ್ಲಿ, ನಡೆದ ಕಾರ್ಯಕ್ರಮದಲ್ಲಿ ಸಂಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಶಾಸಕರು ವೇದವ್ಯಾಸ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಪೂರ್ಣ ಪರಿಚಯ ಮತ್ತು ರೂಪರೇಷೆಗಳನ್ನು ತಿಳಿಸಿದರು. ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಮಯದಲ್ಲಿ ಶಿಬಿರಾತ್ರಿಗಳಿಗೆ ವಿವಿಧ ರೀತಿಯ ಕಾರ್ಯಗಾರಗಳು ನಡೆಯಲಿವೆ, ಕಾರ್ಯಗಾರರ ಎರಡನೇ ದಿನದಲ್ಲಿ ನಗರದ ವಿವಿಧ ಸ್ಥಳಗಳ ವೀಕ್ಷೆಣೆಗೆ ಅವಕಾಶ ಕಲ್ಪಿಸಲಾಗಿದೆ ಜೊತೆ ದೋಣಿ ವಿಹಾರದ ಮೂಲಕ ಸ್ಥಳ ಪರಿಚಯವನ್ನು ಮಾಡಿಸಲಾಗುತ್ತದೆ. ಮೂರನೇ ದಿನ ಶಿಬಿರದ ಕೊನೆಯ ದಿನ ಶಿಬಿರಾತ್ರಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ ಈ ಶಿಬಿರದಲ್ಲಿ ಸುಮಾರು ೫೪೦ ಮಂದಿ ಭಾಗವಹಿಸಿದ್ದು ಅವರಲ್ಲಿ ಯು.ಪಿ, ಸೂರತ್, ಕಾನ್‌ಪುರ, ಬಾವನಗರ, ಮತ್ತು ಶ್ರೀಲಂಕಾದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರಪಥಮ ಬಾರಿಗೆ ಮಂಗಳೂರಿಗೆ ಆಗಮಿಸಲಿರುವ ಈ ವಿಶಿಷ್ಟ ಶಿಬಿರಾತ್ರಿಗಳು ತಮ್ಮ ಕೌಶಲ್ಯ ಮತ್ತು ಅನುಭವ ವನ್ನು ಮಂಗಳೂರಿನ ಜನತೆಗೆ ಪ್ರಚುರ ಪಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನವೀನ ಕಾರ್ಡೋಜ, ಅದ್ಯಕ್ಷರು ಕ್ರೆಡಾಯಿ, ವಾಸುದೇವ ಕಾಮತ್, ರೊನಾಲ್ಡ್ ಗೊಮ್ಸ್, ಪ್ರಶಾಂತ್ ಪೈ, ಮುಕುಂದ್ ಕಾಮತ್, ಐಡಿಯಲ್, ರವಿಶಂಕರ್ ಮಿಜಾರ್, ಹರೀಶ್ ಆಚಾರ್ಯ, ಶರತ್ ಆರ್ ಪೈ, ಮೋಹನ್ ಬೆಂಗ್ರೆ, ಕಿಶೋರ್ ರೈ, ಜಗದೀಶ್ ಶೇಣವ, ಸುಧೀರ್, ಯೋಗೀಶ್ ದೇಸಾಯಿ, ಅನಮ್ ಪ್ರೇಮ್, ಪ್ರಶಾಂತ್ ಭಟ್, ಶ್ರೀನಿವಾಸ್ ಶೇಟ್ ಉಪಸ್ಥಿತರಿದ್ದರು.

ಸಂಯೋಜಕ ಸಂಜಯ್ ಪ್ರಭು ಧನ್ಯವಾಧ ಸಮರ್ಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English