ಹೈದರಬಾದ್ ನಲ್ಲಿ ಇಸ್ರೋ ವಿಜ್ಞಾನಿ ಎಸ್.ಸುರೇಶ್ ಕೊಲೆ

5:41 PM, Wednesday, October 2nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

suresh-sಹೈದರಬಾದ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಮಂಗಳವಾರ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ರೋ ವಿಜ್ಞಾನಿ 56 ವರ್ಷದ ಎಸ್.ಸುರೇಶ್ ಅವರನ್ನು ಹೈದರಬಾದ್ ನಗರದ ಹೃದಯಭಾಗದಲ್ಲಿರುವ ಅಮೀರ್‌ಪೇಟೆ ಪ್ರದೇಶದ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ಅವರು ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಲಾಗಿದೆ. ಸುರೇಶ್ ಅವರು ಕೇರಳ ಮೂಲದವರಾಗಿದ್ದು, ಫ್ಲ್ಯಾಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಪತ್ನಿ ಚೆನ್ನೈ ನಲ್ಲಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಕಚೇರಿಗೆ ಗೈರುಹಾಜರಾಗಿರುವುದನು ಗಮನಿಸಿದ ಅವರ ಸಹೋದ್ಯೋಗಿಯೊಬ್ಬರು ಅವರ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದಿರುವುದರಿಂದ ಅವರ ಚೆನ್ನೈನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ನಿ ಇಂದಿರಾಗೆ ಮಾಹಿತಿ ನೀಡಿದ್ದರು. ಆ ಬಳಿಕ ಸುರೇಶ್ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರು ಹೈದರಬಾದ್ ಗೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಫ್ಯ್ಲಾಟ್ ಗೆ ತೆರಳಿ ಬಾಗಿಲು ಮುರಿದು ಒಳ ಹೋದಾಗ ಸುರೇಶ್ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಯಾವುದೇ ಭಾರವಾದ ವಸ್ತುವಿನಿಂದ ವಿಜ್ಞಾನಿ ಸುರೇಶ್ ಅವರ ತಲೆಗೆ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಜ್ಞಾನಿ ಸುರೇಶ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ 20 ವರ್ಷಗಳಿಂದ ವಿಜ್ಞಾನಿ ಸುರೇಶ್ ಅವರು ಹೈದರಾಬಾದ್ ನಲ್ಲಿ ವಾಸವಾಗಿದ್ದು ಅವರೊಂದಿಗೆ ಪತ್ನಿ ಕೂಡ ಜತೆಗಿದ್ದರು. 2005ರಲ್ಲಿ ಪತ್ನಿ ಇಂದಿರಾ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿತ್ತು. ಈ ದಂಪತಿಗಳ ಪುತ್ರ ಅಮೆರಿಕದಲ್ಲಿ ವಾಸವಾಗಿದ್ದು, ಮಗಳು ದೆಹಲಿಯಲ್ಲಿರುವುದಾಗಿ ತಿಳಿಸಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English