ಕೊಲ್ಲೂರು : ಶ್ರೀ ಮೂಕಾಂಬಿಕಾ ಭೋಜನ ಶಾಲೆಯನ್ನು ಉದ್ಘಾಟಿಸಿದ ಕೋಟ ಶ್ರೀನಿವಾಸ ಪೂಜಾರಿ

10:31 AM, Thursday, October 3rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kolluruಕೊಲ್ಲೂರು : ಧಾರ್ಮಿಕ ದತ್ತಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಬಡಜನರಿಗೆ ಉಚಿತ ಸಾಮೂಹಿಕ ವಿವಾಹಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಎರಡನೇ ಶ್ರೀಮಂತ ದೇಗುಲವಾದ ಕೊಲ್ಲೂರಿನಲ್ಲಿ ಸಹ ಈ ನಿಟ್ಟಿನಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ದೇವಸ್ಥಾನಗಳು ಭಕ್ತರ ಇಷ್ಟಾರ್ಥ ಪೂರೈಕೆಯ ಆರಾಧನಾ ಕೇಂದ್ರಗಳಾಗಿರಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ನೂತನವಾಗಿ ನಿರ್ಮಿಸಲಾದ 21 ಕೋಟಿ ರೂ. ವೆಚ್ಚದ ಶ್ರೀ ಮೂಕಾಂಬಿಕಾ ಭೋಜನ ಶಾಲೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ದೇಗುಲಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇವಸ್ಥಾನದ ಸಂಪನ್ಮೂಲವನ್ನು ಸಮಾಜ ಮುಖಿ ಕಾರ್ಯಕ್ಕೆ ವಿನಿಯೋಗಿಸ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತ ಡಿ, ಕೊಲ್ಲೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆಡಳಿತ ಧರ್ಮದರ್ಶಿಯಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ಯಾಗದಂತೆ ಕಾರ್ಯ ನಿರ್ವಹಿಸಿದ್ದೆ. ಓರ್ವ ಶಾಸಕನಾಗಿ ಈ ಮಟ್ಟಕ್ಕೆ ಬೆಳೆಯ ಬೇಕಾದರೆ ಮೂಕಾಂಬಿಕೆಯ ಅನುಗ್ರಹವೇ ಕಾರಣ. ಕೊಲ್ಲೂರು ಕ್ಷೇತ್ರದಲ್ಲಿ ಅಧರ್ಮಕ್ಕೆ ಎಂದೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಮುಖ್ಯ ಅತಿಥಿಯಾಗಿ ದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಕುಮಾರ್‌ ಶೆಟ್ಟಿ, ಕಾರ್ಯ ನಿರ್ವ ಹಣಾಧಿಕಾರಿ ಎಚ್‌. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಮಿತಿಯ ಸದಸ್ಯರಾದ ಶ್ರೀಧರ ಅಡಿಗ, ರಮೇಶ ಗಾಣಿಗ, ರಾಜೇಶ ಕಾರಂತ, ನರಸಿಂಹ ಹಳಗೇರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಅಭಿಲಾಷ್‌ ಪಿ.ವಿ., ಜಯಂತಿ ವಿಜಯಕೃಷ್ಣ, ಗ್ರಾ.ಪಂ. ಅಧ್ಯಕ್ಷ ಎಸ್‌. ಕುಮಾರ್‌, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ಬೈಂದೂರು ತಹಶೀಲ್ದಾರ್‌ ಬಿ.ಪಿ. ಪೂಜಾರಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಎಂಜಿನಿಯರ್‌ಗಳಾದ ಮುರಳೀಧರ ಹೆಗ್ಡೆ, ಪ್ರದೀಪ ವೇದಿಕೆಯಲ್ಲಿದ್ದರು.

ನಿರೀಕ್ಷಣ ಕೊಠಡಿ ವರದಾ, ವಸುಧಾ, ಭೋಜನ ಕೊಠಡಿ ತಪಸ್ವಿನಿ, ಯಶಸ್ವಿನಿ, ಮನಸ್ವಿನಿ, ಪಾಕ ಶಾಲೆ ಅನ್ನಪೂರ್ಣೇಶ್ವರಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಜಿ.ಪಂ. ಸದಸ್ಯ ಬಾಬು ಹೆಗ್ಡೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ದೇಗುಲದ ಅಧೀಕ್ಷಕ ರಾಮಕೃಷ್ಣ ಅಡಿಗ ಮೊದಲಾದವರಿದ್ದರು. ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗ ತಿಸಿ, ಅಧ್ಯಕ್ಷ ಹರೀಶ ಕುಮಾರ್‌ ಶೆಟ್ಟಿ ಪ್ರಸ್ತಾವನೆಗೈದರು. ಸದಸ್ಯ ನರಸಿಂಹ ಹಳಗೇರಿ ವಂದಿಸಿದರು. ಶಿಕ್ಷಕರಾದ ಸಚಿನ್‌ಕುಮಾರ್‌ ಶೆಟ್ಟಿ ಹುಂಚನಿ, ಸುಕೇಶ್‌ ಶೆಟ್ಟಿ ಹೊಸಮಠ ನಿರೂಪಿಸಿದರು.

ಕಟ್ಟಡ ನಿರ್ಮಿಸಿದ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತ ಫೈಯಾಜುದ್ದೀನ್‌, ಗುತ್ತಿಗೆದಾರ ವಾಸುದೇವ ಶೆಟ್ಟಿ ಕಾಪು, ಆರ್ಕಿಟೆಕ್ಟ್ ಯೋಗೀಶ್ಚಂದ್ರ ದಾರ, ಪ್ರಾಚೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ವಿಜಯಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English