ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ ಗುರುವಾರ ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ನೀಡಲಾಯಿತು.
ಸಂಜೆ 6.30ಕ್ಕೆ ಅನ್ನಪ್ರಸಾದ ವಿತರಣೆ ಪ್ರಾರಂಭವಾಗಿದ್ದು, ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 18 ಸಾವಿರ ಶೇಷವಸ್ತ್ರ ಸಿದ್ಧಪಡಿಸಲಾಗಿದ್ದು, ತಡರಾತ್ರಿಯವರೆಗೂ ವಿತರಣೆ ಕಾರ್ಯ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್ ಚಂದ್ರ ಶೆಟ್ಟಿ, ದೇವಳ ಪ್ರಬಂಧಕ ತಾರನಾಥ ಶೆಟ್ಟಿ, ಭೋಜನ ಶಾಲೆ ವ್ಯವಸ್ಥಾಪಕ ರಘುನಾಥ ಶೆಟ್ಟಿ ಉಪಸ್ಥಿತರಿದ್ದರು. ಕಟೀಲು ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಿದರು. ಕೊಡೆತ್ತೂರು ಹುಲಿವೇಷ ಮೆರವಣಿಗೆ ಇರುವುದರಿಂದ ವಾಹನಗಳನ್ನು ಕಟೀಲು ಸೇತುವೆಯಿಂದ ಮಲ್ಲಿಗೆಯಂಗಡಿ ಮೂಲಕ ಬೈಪಾಸ್ ರಸ್ತೆಯಾಗಿ ಕಿನ್ನಿಗೋಳಿ ಹಾಗೂ ಗಿಡಿಗೆರೆ ಮೂಲಕವಾಗಿ ಕಟೀಲು ಬಸ್ ನಿಲ್ದಾಣಕ್ಕೆ ಸಂಚರಿಸುವ ವ್ಯವಸ್ಥೆ ಮಾಡಲಾಗಿದ್ದು ಟ್ರಾಫಿಕ್ ವ್ಯವಸ್ಥೆಯಲ್ಲೂ ಬದಲಾಯಿಸಲಾಗಿದೆ.
Click this button or press Ctrl+G to toggle between Kannada and English