ರೋಶನಿ ನಿಲಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಏಳನೇ ವರ್ಷಾಚರಣೆ

4:13 PM, Saturday, October 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

RTI Actಮಂಗಳೂರು : ವೈಟ್ ವಿಸ್ಟಲ್  ಮಂಗಳೂರು, ಸೋಶಿಯಲ್ ಚೇಂಜ್ ಮ್ಯಾನೇಜ್ ಮೆಂಟ್ ಪೋರಮ್, ಸ್ಕೂಲ್ ಅಪ್ ಸೋಶಿಯಲ್  ವರ್ಕ್ಸ್ ರೋಶನಿ ನಿಲಯ ಇವುಗಳ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಇಂದು ಬೆಳಿಗ್ಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಏಳನೇ ವರ್ಷಾಚರಣೆಯ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ರವೀಂದ್ರ ಶಾನ್ ಭೋಗ್, ವಿದ್ಯಾವಂತರು ಮಾಹಿತಿಯನ್ನು ಪಡೆದುಕೊಳ್ಳುವುದು ಸುಲಭ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಬಗ್ಗೆ ಅರಿವಿರುವುದಿಲ್ಲ. ಅದನ್ನು ತಿಳಿಯಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

RTI Actನಮ್ಮಲ್ಲಿ ವಿಶಾಲ್ ಮನೋಬಾವ ಬೆಳೆಯಬೇಕು. ತನ್ನಲ್ಲಿರುವ ಜ್ಞಾನವನ್ನು ಇನ್ನೊಬ್ಬರಿಗೆ ಹೇಳಿದರೆ ನಮ್ಮ ಜ್ಞಾನ ಇನ್ನಷ್ಟು ವೃದ್ಧಿಯಾಗುತ್ತದೆ. ನಮಗೆ ತಿಳಿಯದ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳುವುದು ನಮ್ಮ ಹಕ್ಕು.  ನಾವು ಪಡೆದ ಮಾಹಿತಿಯನ್ನು ಇನ್ನೊಬ್ಬರಿಗೆ ತಿಳಿಸಿದರೆ ನಮ್ಮಲ್ಲಿರುವ ದಡ್ಡತನವನ್ನು ದೂರಮಾಡಿ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರೀಟಾ ನೋರೊನ್ಹ, ಸಂಪನ್ಮೂಲ ವ್ಯಕ್ತಿಯಾಗಿ ತುಕರಾಮ್, ಡಾ. ಸೊಫಿನ ಫೆರ್ನಾಂಡಿಸ್, ಕೃಷ್ಣ ಎಂ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರ್ಷರಾಜ್ ಗಾಟೆ ನಿರ್ವಹಿಸಿದರು. ಸಿ.ಶಾಂತಿ ವಂದನಾರ್ಪಣೆ ಸಲ್ಲಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English