ಬೆಂಗಳೂರು : ನ್ಯಾಯಮೂರ್ತಿ ಹುದ್ದೆಗೆ 12 ವಕೀಲರ ಹೆಸರು ಶಿಫಾರಸು

10:49 AM, Saturday, October 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

supreem-courtಬೆಂಗಳೂರು : ರಾಜ್ಯದ ವಕೀಲ ವೃಂದದಿಂದ 12 ಮಂದಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಶಿಫಾರಸು ಮಾಡಿದೆ. ಸಿಜೆಐ ರಂಜನ್ ಗೊಗೊಯ್ ನೇತೃತ್ವದಲ್ಲಿ ಗುರುವಾರ ನಡೆದ ಕೊಲಿಜಿಯಂನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಂಜಯ್ಗೌಡ, ಎಂ.ಜ್ಯೋತಿ, ಆರ್. ನಟರಾಜ್, ಎನ್.ಆರ್. ನಾಯಕ್, ಹೇಮಂತ್ ಚಂದನಗೌಡರ್, ಆರ್. ವಿ. ಹೊಸಮನಿ, ಪ್ರದೀಪ್ ಸಿಂಗ್ ಯೆರೂರ್ ಮತ್ತು ಎಂ.ಎನ್. ನಾಗಪ್ರಸನ್ನ ಅವರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಎಸ್. ವಿಶ್ವಜಿತ್ ಶೆಟ್ಟಿ, ಇ.ಎಸ್. ಇಂದಿರೇಶ್, ಐಂ.ಐ.ಅರುಣ್ ಮತ್ತು ಎಂ.ಜಿ.ಎಸ್ ಕಮಲ್ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಮರುಶಿಫಾರಸು ಮಾಡಲಾಗಿದೆ.

ಈ ನಾಲ್ವರ ಹೆಸರನ್ನು ಕೊಲಿಜಿಯಂ ಕಳೆದ ಮಾರ್ಚ್ನಲ್ಲಿ ಕೇಂದ್ರಕ್ಕೆ ಕಳುಹಿಸಿತ್ತಾದರೂ ಕೇಂದ್ರ ಸರ್ಕಾರ ಕೆಲ ಆಕ್ಷೇಪಣೆ ಎತ್ತಿತ್ತು. ಇದೀಗ ಕೊಲಿಜಿಯಂ ಆಕ್ಷೇಪಣೆಗಳನ್ನು ಪರಿಶೀಲಿಸಿದ್ದು, ಕರ್ನಾಟಕದಲ್ಲಿ ನ್ಯಾಯಮೂರ್ತಿಗಳ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ ಈ ನಾಲ್ವರು ವಕೀಲರ ಹೆಸರನ್ನು ಮತ್ತೆ ನ್ಯಾಯಮೂರ್ತಿಗಳ ಹುದ್ದೆಗೆ ಪರಿಗಣಿಸಬೇಕು ಎಂದು ಶಿಫಾರಸು ಮಾಡಿದೆ. ಸೆ.23ರಂದು ಹೈಕೋರ್ಟ್ಗೆ ವಕೀಲರ ವೃಂದದಿಂದ ನಾಲ್ಕು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದನ್ನು ಸ್ಮರಿಸಬಹುದು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English