ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಅಂತಿಮ ಹಂತಕ್ಕೆ ತಲುಪಿದೆ. ವಿಜಯ ದಶಮಿಯ ದಿನವಾದ ಇಂದು ಸುಪ್ರಸಿದ್ದ ಜಂಬೂ ಸವಾರಿ ನಡೆಯಲಿದ್ದು, ಅರ್ಜುನನ ಮೇಲೆರಿ ಬರುವ ಚಾಮುಂಡೇಶ್ವರಿಯ ಕಾಣಲು ಲಕ್ಷಾಂತರ ಜನ ಕಾತರದಿಂದ್ದಾರೆ.
ಇಂದು ಮಧ್ಯಾಹ್ನ 2.15ರಿಂದ 2.58ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆಯ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಸಂಜೆ 4.31 ರಿಂದ 4.57ರೊಳಗೆ ಸಲುವ ಶುಭ ಕುಂಭ ಲಗ್ನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಸುಮಾರು 26 ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಲಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯಲ್ಲಿ 39 ಸ್ಥಬ್ಧಚಿತ್ರಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಎನ್ ಎಸ್ ಎಸ್, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಪೊಲೀಸ್ ಪಡೆಗಳು, ಅಶ್ವಾರೋಹಿಗಳು, ಆನೆ ಗಾಡಿಗಳು ಭಾಗವಹಿಸಲಿವೆ.
Click this button or press Ctrl+G to toggle between Kannada and English