ಕಣ್ಣಿಗೆ ಖಾರದಪುಡಿ ಎರಚಿ 2.5 ಲಕ್ಷ ದರೋಡೆ : ಮೂವರು ದುಷ್ಕರ್ಮಿಗಳು ಪರಾರಿ

2:38 PM, Tuesday, October 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

vijayapuraವಿಜಯಪುರ : ಹಾಡಹಾಗಲೇ ಕಣ್ಣಿಗೆ ಖಾರದಪುಡಿ ಎರಚಿ ಮೂವರು ದುಷ್ಕರ್ಮಿಗಳು ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ದರೋಡೆ ಮಾಡಿದ್ದಾರೆ.

ಗ್ರಾಮೀಣ ಕೋಟಕ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಕುಮಾರ ಹಂಚನಾಳ, ಹಂಜಗಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದಿಂದ 1.5 ಲಕ್ಷ ಹಣ ಸಂಗ್ರಹಿಸಿ ಕೊಂಡುಬರುವಾಗ ಈ ಕೃತ್ಯ ಎಸಗಲಾಗಿದೆ. ದರೋಡೆ ಮಾಡುವ ಸಂದರ್ಭದಲ್ಲಿ ವಿನೋದ್‍ಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಗ್ರಾಮದಲ್ಲಿ ಹಣವನ್ನು ಸಂಗ್ರಹಿಸಿ ಬರುತ್ತಿದ್ದನ್ನು ಗಮನಿಸಿ ಬೈಕಿನಲ್ಲಿ ಹಿಂಬಾಲಿಸಿ ಬಂದ ಮೂವರು ಮುಸುಕುಧಾರಿಗಳು ಸಿನಿಮಾ ಶೈಲಿಯಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಹಲ್ಲೆ ಮಾಡಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English