ಬೆಂಗಳೂರು : ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಜೈಲಿನಲ್ಲೂ ಅಕ್ರಮ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ನಗರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಈ ದಾಳಿ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ 60 ಮಂದಿ ತಂಡ ದಾಳಿ ನಡೆಸಿ ಕೈದಿಗಳ ವಿಚಾರಣೆ ನಡೆಸಿದೆ.
ಜೈಲಿನೊಳಗೆ ಗಾಂಜಾ ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಜೈಲಿನೊಳಗೆ ಮಾರಕಾಯುಧಗಳು ಕೂಡಾ ಪತ್ತೆಯಾಗಿವೆ ಎಂದೂ ವರದಿಯಾಗಿದೆ.
Click this button or press Ctrl+G to toggle between Kannada and English