ಉಜಿರೆ: ಪಾಶ್ಚಾತ್ಯ ಸಂಗೀತದ ಪ್ರಭಾವದಿಂದಯಕ್ಷಗಾನ, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲಾಪ್ರಕಾರಗಳು ಮರೆಯಾಗಬಹುದೆಂಬ ಭಯ, ಆತಂಕಅಗತ್ಯವಿಲ್ಲ ಎಂದುಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ಶ್ರೀ ಮಂಜುನಾಥ ಸ್ವಾಮಿದೇವಸ್ಥಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‌ಟ್ರಸ್ಟ್‌ನ ಸಂಯುಕ್ತಆಶ್ರಯದಲ್ಲಿ ನಡೆದ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದಲ್ಲಿ ಸಂಗೀತ ಕಳಾನಿಧಿ ಎ. ಕನ್ಯಾಕುಮಾರಿಅವರಿಗೆ ವೀಣೆ ಶೇಷಣ್ಣ ಸ್ಮಾರಕರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷರೂ. ನಗದು) ಹಾಗೂ ಸಂಗೀತಕಲಾರತ್ನ ನೀಲಾ ರಾಂಗೋಪಾಲ್‌ಅವರಿಗೆ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷರೂ. ನಗದು) ನೀಡಿ ಗೌರವಿಸಿದರು.
ಅನೇಕ ಮಂದಿ ಯುವಕಲಾವಿದರುವಿವಿಧ ಭಾರತೀಯ ಸಂಗೀತ ಕಲಾಪ್ರಕಾರಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿಇಂದು ಜಾಗತಿಕ ಮಟ್ಟದಲ್ಲಿಉನ್ನತ ಸಾಧನೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಯಾವುದೇ ರೀತಿಯ ಪಾಶ್ಚಾತ್ಯ ಸಂಗೀತ ಹಾಗೂ ವಾದ್ಯಗಳು ಭಾರತೀಯ ಮೂಲದ ಸಂಗೀತ ಪರಂಪರೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದುಅವರು ಹೇಳಿದರು.
ವೀಣೆ ಶೇಷಣ್ಣ ಸಂಗೀತೋತ್ಸವ, ಹಿರಿಯ ಕಲಾವಿದರನ್ನುಗೌರವಿಸುವುದು, ವಿಚಾರ ಸಂಕಿರಣ, ಸಂಗೀತ ಕಲಿಯುವವರಿಗೆ ಪ್ರೋತ್ಸಾಹ ನೀಡುವುದು ಇತ್ಯಾದಿ ಕಾರ್ಯಕ್ರಮಗಳು ನಮ್ಮ ಭಾರತೀಯ ಸಂಗೀತ ಪರಂಪರೆಯನ್ನು ಉಳಿಸಿ – ಬೆಳೆಸಲು ಸಮಗೆ ಹೆಚ್ಚಿನ ಪ್ರೇರಣೆ ಮತ್ತುಉತ್ಸಾಹವನ್ನು ನೀಡುತ್ತವೆ. ಭಾರತೀಯ ಸಂಗೀತ ಪ್ರಕಾರದ ವಾದ್ಯಗಳನ್ನು, ಸಂಗೀತ ಪರಿಕರಗಳನ್ನು ಉಳಿಸುವ ಕಾರ್ಯ ಮಾಡಬೇಕುಎಂದುಅವರು ಸಲಹೆ ನೀಡಿದರು.
ನವರಾತ್ರಿ ಸಂದರ್ಭ ಈ ಬಾರಿ ೧೦೨ ಚೆಂಡೆ ವಾದನ ತಂಡಗಳು, 40 ಡೋಲು ವಾದಕರು 8 ದಿನಗಳಲ್ಲಿ ಧರ್ಮಸ್ಥಳಕ್ಕೆ ಬಂದು ಕಲಾಸೇವೆ ಮಾಡಿದ್ದಾರೆ ಎಂದು ಹೇಳಿದ ಹೆಗ್ಗಡೆಯವರು ಅವರ ಕಲಾಪ್ರಭುತ್ವ ಮತ್ತು ಸೊಗಡನ್ನು ಶ್ಲಾಘಿಸಿದರು.
ಕದ್ರಿ ಗೋಪಾಲನಾಥ್ ದಕ್ಷಿಣ ಕನ್ನಡ ಜಿಲ್ಲೆಯ ಅಮೂಲ್ಯ ಕಲಾರತ್ನ ಎಂದು ಬಣ್ಣಿಸಿದ ಹೆಗ್ಗಡೆಯವರು ಆತನ ಆತ್ಮಕ್ಕೆ ಚಿರಶಾಂತಿಯನ್ನುಕೋರಿದರು.ಇಂದಿನ ಸಮಾರಂಭಕ್ಕೆಆತನನ್ನುಆಹ್ವಾನಿಸುವ ಯೋಚನೆ ಇತ್ತು.ಇತ್ತೀಚೆಗೆ ಬಜ್ಪೆಯಿಂದ ಬೆಂಗಳೂರಿಗೆ ವಿಮಾನದಲ್ಲಿ ಹೋಗುವಾಗ ಆತನೊಂದಿಗೆ ಜೊತೆಯಾಗಿ ಪ್ರಯಾಣಿಸಿದ್ದು ಆತ್ಮೀಯವಾಗಿ ಮಾತುಕತೆ ನಡೆಸಿರುವುದನ್ನು ಹೆಗ್ಗಡೆಯವರು ಸ್ಮರಿಸಿದರು.
ಪ್ರಶಸ್ತಿ ಪುರಸ್ಕೃತರಾದ ಎ. ಕನ್ಯಾಕುಮಾರಿ ಮಾನಾಡಿ,ತನ್ನಕಲಾಸಾಧನೆಗೆ ಪ್ರೋತ್ಸಾಹಿಸಿದ ಎಂ.ಎಲ್. ವಸಂತಕುಮಾರಿ, ಕದ್ರಿ ಗೋಪಾಲನಾಥ್ ಮೊದಲಾದವರನ್ನುಕೃತಜ್ಞತೆಯಿಂದ ಸ್ಮರಿಸಿದರು.ಧರ್ಮಸ್ಥಳದಲ್ಲಿ ಪ್ರಶಸ್ತಿ ಪಡೆದುತನ್ನಜನ್ಮ ಸಾರ್ಥಕವಾಗಿದೆಎಂದುಅವರುಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕೃತರಾದ ನೀಲಾ ರಾಂಗೋಪಾಲ್ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ತಾನು ಮುಂದೆಯೂ ನಿರಂತರ ಕಲಾಸೇವೆ ಮಾಡುವುದಾಗಿ ಭರವಸೆ ನೀಡಿದರು.
ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‌ಟ್ರಸ್ಟ್‌ನಅಧ್ಯಕ್ಷ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೀಣೆ ಮತ್ತು ಮೈಸೂರಿಗೆಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಮೂಲಕ ಅನೇಕ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆ ಎಂದರು.
ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಸ್ವಾಗತ ಸಮಿತಿಅಧ್ಯಕ್ಷ ಡಿ. ಹರ್ಷೇಂದ್ರಕುಮಾರ್ ಸ್ವಾಗತಿಸಿದರು.
ಶ್ಯಾಮ ಸುಂದರಶರ್ಮಧನ್ಯವಾದವಿತ್ತರು.ರಾಧಿಕಾಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English