ಶಿವಮೊಗ್ಗ : ತಲಾಖ್ ನೀಡಿದರೆ ಕಠಿಣ ಶಿಕ್ಷೆಗೆ ಗುರಿ ಮಾಡುವ ಕಾನೂನು ದೇಶಾದ್ಯಂತ ಜಾರಿಯಾಗಿದೆ. ಆದರೂ ತಲಾಖ್ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಲೇ ಇವೆ.
ಶಿವಮೊಗ್ಗದಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪತಿಯಿಂದ ತಲಾಖ್ ಶಿಕ್ಷೆಗೆ ಗುರಿಯಾದ ಆಯೇಷಾ ಸಿದ್ದಿಕಿ ತನಗೆ ತಲಾಖ್ ಬೇಡ, ಗಂಡ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಆಯೆಷಾ ಸಿದ್ದಿಕಿಗೆ ಪತಿ ಮುಸ್ತಫಾ ಬೇಗ್ ವಾಟ್ಸಪ್ ಮೂಲಕ ತಲಾಖ್ ನೀಡಿದ್ದ. ದುಬೈನಲ್ಲಿ ಕೆಲಸ ಮಾಡುತ್ತಿರುವ ಮುಸ್ತಫಾ ಪತ್ನಿಯೊಂದಿಗೆ ಸಂಬಂಧ ಕಡಿದುಕೊಂಡದ್ದಲ್ಲದೆ, ಆಕೆಗೆ ಪ್ರತಿ ತಿಂಗಳು ಹಣ ಕಳಿಸುವುದನ್ನೂ ನಿಲ್ಲಿಸಿದ್ದ.
ಗಂಡನ ಈ ವರ್ತನೆಯಿಂದ ಕಂಗಾಲಾಗಿದ ಆಯೇಷಾ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಯಾವ ಪ್ರಯೋಜನವೂ ಆಗದ ಕಾರಣ ಹೋರಾಟ ನಡೆಸುತ್ತಿದ್ದಾರೆ. ತಲಾಖ್ ವಿರುದ್ಧ ಧ್ವನಿ ಎತ್ತುವ ಮೂಲಕ ತನಗೆ ಗಂಡ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆಯೇಷಾ ಮಾತನಾಡಿ, ಪತಿ ವಿರುದ್ಧ ದೂರು ನೀಡಿ ತಿಂಗಳು ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆತನನ್ನು ದುಬೈನಿಂದ ಕರೆಸಿ, ವಿಚಾರಣೆ ನಡೆಸುತ್ತಿಲ್ಲ. ನನ್ನ ಹೋರಾಟಕ್ಕೆ ಅಧಿಕಾರಿಗಳು ಸಹಕಾರ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಮಗಳೊಂದಿಗೆ ಪ್ರತಿಭಟನೆ ಮುಂದುವರೆಸುತ್ತೇನೆ ಎಂದು ಎಚ್ಚರಿಸಿದ್ದಾರೆ.
Click this button or press Ctrl+G to toggle between Kannada and English