ಉಡುಪಿ : ಭಕ್ತಿ, ನೃತ್ಯ, ಹಾಡುಗಾರಿಕೆ ಒಳಗೊಂಡಿರುವ ತುಳಸಿ ಸಂಕೀರ್ತನೆ ಕಲೆ ಅಪೂರ್ವವಾದುದು. ನಶಿಸುತ್ತಿರುವ ಈ ಕಲೆಗೆ ಜೀವ ನೀಡುವ ತುಶಿಮಾಮ ಸಂಘಟನೆ ಪ್ರಯತ್ನ ಅಭಿನಂದನೀಯ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಮಧ್ವಮಂಟಪದಲ್ಲಿ ಪರ್ಯಾಯ ಪಲಿಮಾರು ಮಠ ಮತ್ತು ತುಳು ಶಿವಳ್ಳಿ ಮಾಧ್ವ ಮಹಾಮಂಡಲ ವತಿಯಿಂದ ಒಂದು ವಾರ ನಡೆಯುವ ತುಳಸಿ ಸಂಕೀರ್ತನೆ ಸಪ್ತಾಹ ಸ್ಪರ್ಧೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಹಿರಿಯ ಸಾಹಿತಿ ಎ.ವಿ.ನಾವಡ, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಸಂಸ್ಥೆ ಮುಖ್ಯಸ್ಥ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಪತಿ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಕೃಷ್ಣರಾಜ ಸರಳಾಯ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ಣಾಟಕ ಬ್ಯಾಂಕ್ ಎಜಿಎಂ ಗೋಪಾಲಕೃಷ್ಣ ಸಾಮಗ, ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ತುಳಸಿಕಟ್ಟೆ ಮನೆ ಎದುರಿಗೆ ಇದ್ದರೆ ಆರೋಗ್ಯವೂ ಪ್ರಾಪ್ತಿಯಾಗುತ್ತದೆ. ಇಂತಹ ವಿಶಿಷ್ಟ ಗುಣ ತುಳಸಿಗಿದೆ. ಬಹು ಮಹಡಿ ಕಟ್ಟಡಗಳಲ್ಲಿ ತುಳಸಿಕಟ್ಟೆ ನಿರ್ಮಾಣ ಮಾಡಿದರೆ ತುಶಿಮಾಮ ಸದಸ್ಯರು ಬಂದು ಸಂಕೀರ್ತನಾ ಸೇವೆ ನಡೆಸಿಕೊಡಲಿದ್ದಾರೆ. ಸ್ಪರ್ಧೆಯಲ್ಲಿ ಕೃಷ್ಣ-ಮುಖ್ಯಪ್ರಾಣ ದೇವರ ಅನುಗ್ರಹವೇ ಬಹುಮಾನ ಎಂದು ಸ್ಪರ್ಧಾಳುಗಳು ಭಾವಿಸಬೇಕು. ಎಂದು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ತಿಳಿಸುತ್ತಾರೆ.
Click this button or press Ctrl+G to toggle between Kannada and English