ಭಟ್ಕಳ : ಆಟೋ ರಿಕ್ಷಾದಲ್ಲಿ ಸಿಕ್ಕ ಒಡವೆ ಬ್ಯಾಗ್ ಹಿಂತಿರುಗಿಸಿದ ಆಟೋ ಚಾಲಕ

5:03 PM, Tuesday, October 15th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

auto-rikshaಭಟ್ಕಳ : ತನ್ನ ಆಟೋ ರಿಕ್ಷಾದಲ್ಲಿ ಸಿಕ್ಕ ಮಹಿಳೆಯೋರ್ವರ ಪರ್ಸನ್ನು ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನನ್ನು ಭಟ್ಕಳ ಉಪ ವಿಭಾಗದ ಎಎಸ್‍ಪಿ ನಿಖಿಲ ಬಿ. ಸನ್ಮಾನಿಸಿ ಚಾಲಕನ‌ ಕಾರ್ಯವನ್ನು ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರೆಂದರೆ ಮೂಗು ಮುರಿಯುವ ಸಾರ್ವಜನಿಕರಿಗೆ ಇಲ್ಲೊಬ್ಬ ಆಟೋ ಚಾಲಕ ಸಾರ್ವಜನಿಕರಿಂದಲೇ ಶಹಬ್ಬಾಸ್ಗಿರಿ ಪಡೆದುಕೊಂಡಿದ್ದಾನೆ. ಆಟೋ ಚಾಲಕ ಅಣ್ಣಪ್ಪ ಗೊಂಡ ಎಂಬಾತ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಲ್ಲಿನ ನಿಶಾತ ಆಸ್ಪತ್ರೆಯಿಂದ ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ಇಲ್ಲಿನ ಬೆಳಕೆ ಗೋಳಿಮರಕ್ಕೆ ಬಿಟ್ಟು ಬಂದಿದ್ದರು.

ಆ ಬಳಿಕ, 4-5 ಮಂದಿ ಪ್ರಯಾಣಿಕರು ಅದೇ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಚಾಲಕ ಇಲ್ಲಿನ‌ ಮುಗ್ದುಮ ಕಾಲೋನಿಗೆ ಒಬ್ಬರನ್ನು ಬಾಡಿಗೆ ಬಿಟ್ಟು ಬರುವ ವೇಳೆ ಆಟೋ ಒಳಗೆ ಏನೋ ಶಬ್ದ ಬಂದಿದ್ದನ್ನು‌ ಗಮನಿಸಿದ್ದಾನೆ. ಆಗ ಆಟೋ ಹಿಂಬದಿಯ ಸೀಟ್ ಮೇಲೆ ಇದ್ದ ಲಗೇಜ್ ಇಡುವ ಜಾಗದಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರನ್ನು ಪರಿಶೀಲಿಸಿದಾಗ ಬ್ಯಾಗಿನಲ್ಲಿ 3.5 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಆಭರಣಗಳಿದ್ದವು. ಅದರಲ್ಲಿ ಒಂದು ಪಾನ್ ಕಾರ್ಡ್ ಕೂಡಾ ಪತ್ತೆಯಾಗಿತ್ತು.

ಕೂಡಲೇ ಆಟೋ ಚಾಲಕ ಅಣ್ಣಪ್ಪ ಅದನ್ನು ನಗರ ಠಾಣೆ ಎಎಸ್‍ಐ ನವೀನ ಬೋರ್ಕರ ಬಳಿ ನೀಡಿದ್ದಾರೆ. ಪಾನ್ ಕಾರ್ಡ್ ಆಧಾರದ ಮೇಲೆ ಅವರು ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕರಾದ ಜಯಂತಿ ಮೊಗೇರ ಎಂಬುವವರನ್ನು ಪತ್ತೆ ಹಚ್ಚಿದ್ದಾರೆ. ಅವರನ್ನು ಠಾಣೆಗೆ ಕರೆಯಿಸಿ ಖಚಿತ ಪಡಿಸಿಕೊಂಡು ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನನ್ನು ಸನ್ಮಾನಿಸಿದ್ದಾರೆ.ತಾಲೂಕಿನ ಸಬ್ಬತ್ತೆಯ ನಿವಾಸಿ ಆಟೋ ಚಾಲಕ‌ ಅಣ್ಣಪ್ಪ ಗೊಂಡ ಕಳೆದ 15 ವರ್ಷದಿಂದ ಆಟೋ ಚಾಲಕನಾಗಿ‌ ಕೆಲಸ ಮಾಡುತ್ತಿದ್ದು, 3 ವರ್ಷಗಳ ಹಿಂದೆ ಇದೇ ರೀತಿ ಓರ್ವರ ಬ್ಯಾಗ್ ಪತ್ತೆಯಾಗಿದ್ದ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಯಾಣಿಕರ‌ ಮನೆಗೆ ತಲುಪಿಸುವ ಕೆಲಸ ಮಾಡಿರುವುದು ಇದೇ ಸಂದರ್ಭದಲ್ಲಿ ತಿಳಿದು ಬಂದಿದೆ.ಆಟೋ ಚಾಲಕನಿಗೆ ಸನ್ಮಾನಿಸಿದ ಭಟ್ಕಳ ಎಎಸ್ಪಿ ನಿಖಿಲ್ ಬಿ., ಚಾಲಕನ ಕಾರ್ಯವನ್ನು ಶ್ಲಾಘಿಸಿ ನಮಗೆ ನಿಮ್ಮಂತಹ ಚಾಲಕರಿಂದ‌ ಸಾಕಷ್ಟು ಸಹಕಾರವಾಗಿದೆ. ಇಬ್ಬರು ಸಹ ಸೇವೆಗೆ ನಿಂತಿದ್ದೇವೆ. ಸಮಾಜಕ್ಕೆ ಉತ್ತಮ‌ ಕೆಲಸ ಮಾಡಬೇಕು. ನಿಮ್ಮ ಈ ಉತ್ತಮ‌ ಕಾರ್ಯ ನಿಮ್ಮ ಕುಟುಂಬದವರಿಗೆ, ಮಕ್ಕಳಿಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.ಈ‌ ಕಾರ್ಯದಲ್ಲಿ ಪೊಲೀಸರು ಸಹ ಉತ್ತಮ ಕೆಲಸ ನಿರ್ವಹಿಸಿದ್ದು, ಚಾಲಕ ನೀಡಿದ ಪಾನ್ ಕಾರ್ಡ್ನಲ್ಲಿನ ಮಾಹಿತಿಯನ್ನಾಧರಿಸಿ ಎಎಸ್ಐ ನವೀನ ಬೋರ್ಕರ ಆ ಊರಿನ ಸ್ಥಳೀಯರನ್ನು ಸಂಪರ್ಕಿಸಿ ಮಹಿಳೆಯ ಬಗ್ಗೆ ಮಾಹಿತಿ ಕಲೆಹಾಕಿ ಠಾಣೆಗೆ ಕರೆಸಿ ಅವರಿಗೆ ಚಿನ್ನಾಭರಣ ಹಸ್ತಾಂತರಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English