ಜೀತ ಪದ್ಧತಿ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

5:20 PM, Wednesday, October 16th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

jeeta-padhatiವಿಜಯಪುರ : ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಯಶವಂತ ಕಾಂಬಳೆ ಎಂಬುವವರನ್ನು ಅದೇ ಗ್ರಾಮದ ರಮೇಶ ಮಸಳಿ ಹಾಗೂ ಮಲ್ಲೇಶಿ ಮಸಳಿ ಎಂಬುವವರು ಜೀತಕ್ಕೆ ಇಟ್ಟುಕೊಂಡಿರುವುದನ್ನು ಖಂಡಿಸಿ ರಾಜ್ಯ ಛಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಛಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಆನಂದ ಔದಿ ಮಾತನಾಡಿ, ಬಿಜ್ಜರಗಿ ಗ್ರಾಮದಲ್ಲಿ ಯಶವಂತ ಕಾಂಬಳೆ ಅವರನ್ನು 2015 ರಿಂದ ಜೀತದಾಳಾಗಿ ಇಟ್ಟುಕೊಳ್ಳಲಾಗಿತ್ತು. ಈ ವಿಷಯ ತಿಳಿದು ನಮ್ಮ ಪದಾಧಿಕಾರಿಗಳು ಬಿಜ್ಜರಗಿಗೆ ಹೋಗಿ ಯಶವಂತ ಹಾಗೂ ಅವರ ಕುಟುಂಬವನ್ನು ಜೀತಮುಕ್ತಿಗೊಳಿಸಿದ್ದರು.

ರಮೇಶ ಹಾಗೂ ಮಲ್ಲೇಶ ಮಸಳಿ ಎಂಬುವವರು ಮತ್ತೆ ಯಶವಂತನನ್ನು ಕರೆದೊಯ್ದು ಜೀವಬೆದರಿಕೆ ಹಾಕಿ ಜೀತಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಇದರಿಂದ ನೊಂದ ಯಶವಂತ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಜೀತ ಪದ್ಧತಿಯಿಂದ ನೋಂದಿರುವ ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಯಶವಂತ ಕಾಂಬಳೆ ಮೇಲೆ ಒತ್ತಡ ತಂದು ಜೀತಕ್ಕೆ ಇಟ್ಟುಕೊಂಡಿದ್ದ ರಮೇಶ ಹಾಗೂ ಮಲ್ಲೇಶಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಭಯದಿಂದ ನರಳುತ್ತಿರುವ ಬಡ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

ಮಂಜುನಾಥ ವಾಲಿಕಾರ, ರಮೇಶ ಚಲವಾದಿ, ಮಹೇಶ ಜೈನಾಪುರ, ಅಲ್ಲಾಭಕ್ಷ ಕಾಖಂಡಕಿ, ಪ್ರೇಮಾನಂದ ಆಕಾಶಿ, ಜಗದೀಶ ಹೊಸಮನಿ, ಯಶವಂತ ಕಾಂಬಳೆ, ಪರಸರಾಮ ಮೆಗಡೆ, ಹಮೀದ್ ಸಿಂಗೆ, ರಾಹುಲ್ ಮಾನಕರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English