ಮಂಗಳೂರು : ಬಂದರಿನಲ್ಲಿರುವ ಹಿದಾಯತ್ ಸೆಂಟರ್ ನ ಪಕ್ಕದ ಸುರೇಶ್ ಮಾಲೀಕತ್ವದ ನವಜೀವನ ಟ್ರೇಡರ್ಸ್ ಟಯರ್ ಅಂದದಿಗೆ ಬೆಂಕಿ ಕಾಣಿಸಿಕೊಂಡ್ಡಿದ್ದು ಸ್ಥಳೀಯರ ಸಹಾಯದಿಂದ ಭಾರೀ ದುರಂತ ತಪ್ಪಿದೆ.
ಈ ಬಗ್ಗೆ ಇರ್ಷಾದ್ ವೇಣೂರ್ ಪಾಂಡೇಶ್ವರ್ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ ಮೆಸ್ಕಂನವರಿಗೂ ತಿಳಿಸಿ ಕರೆಂಟ್ ಆಫ್ ಮಾಡಲು ಮನವಿ ಮಾಡಿದರು.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು, ಸುಮಾರು 6 ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗೆದೆ.
Click this button or press Ctrl+G to toggle between Kannada and English