ಪೌರತ್ವ ಮತ್ತು ಸಮುದಾಯ ಜೀವನ ತರಬೇತಿ ಶಿಬಿರದ ಸಮಾರೋಪ

4:37 PM, Friday, October 18th, 2019
Share
1 Star2 Stars3 Stars4 Stars5 Stars
(No Ratings Yet)
Loading...

sringeriಶೃಂಗೇರಿ : ಅಧುನಿಕ ಜಗತ್ತಿಗೆ ಶಿಕ್ಷಣದ ಜತೆಗೆ ಸಂಸ್ಕೃತಿಯನ್ನೂ ಕಲಿಸುವ ಮನೋಭಾವ ಪ್ರತಿ ಶಿಕ್ಷಕರಲ್ಲೂ ಇರಬೇಕು.ಆಗ ದೇಶ ವಿಶ್ವ ಗುರುವಾಗಲು ಸಾಧ್ಯ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಶ್ರಿಗುಣನಾಥ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಪೌರತ್ವ ಮತ್ತು ಸಮುದಾಯ ಜೀವನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಾನವನು ಅರಿಯ ಬೇಕಾದ ವಿದ್ಯೆಗಳಲ್ಲಿ ಉನ್ನತ ಹಾಗೂ ಸಾಮಾನ್ಯ ಎಂಬ ಎರಡು ರೀತಿಯ ವಿದ್ಯೆ ಇದೆ. ಈ ಎರಡನ್ನೂ ಪರೀಕ್ಷಿಸುವ, ಅದರಲ್ಲಿರುವ ವ್ಯಾಪ್ತಿ ತಿಳಿಯುವ ಹಂಬಲ ನಮ್ಮಲ್ಲಿರಬೇಕು. ಶಿಕ್ಷಣ ಅಂತರಂಗದಲ್ಲಿರುವ ದಿವ್ಯತೆ ಹೊರಹೊಮ್ಮಿಸಬೇಕು ಎಂದರು.

ವರ್ತಮಾನದ ಶಿಕ್ಷಣ ದೇಶದ ಉನ್ನತಿಗೆ ಪೂರಕವಾಗಿರಬೇಕು. ಆದರೆ ಪ್ರಸ್ತುತ ಶಿಕ್ಷಣದಿಂದ ಒಂದಷ್ಟು ಜ್ಞಾನಗಳು ಮೆದುಳನ್ನು ತುಂಬುತ್ತದೆ. ಆದರೆ ಮನಸ್ಸನ್ನು ತಟ್ಟುವುದಿಲ್ಲ. ಸ್ವತಂತ್ರ್ಯಾಗಿ ಆಲೋಚಿಸುವ, ನಿರ್ಣಯ ರೂಪಿಸುವ ಶಕ್ತಿಯನ್ನು ಶಿಕ್ಷಣದ ಮೂಲಕ ಹೇಳಿಕೊಡುವ ಶಿಕ್ಷಕರ ಅಗತ್ಯವಿದೆ. ಇಂದು ದೇಶಕ್ಕೆ ವಿಶಾಲತೆ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡ ಪದವೀಧರರ ಅನಿವಾರ್ಯತೆ ಇದೆ. ಶಿಕ್ಷಣದಲ್ಲಿ, ಕ್ರಿಯಾಶೀಲತೆ, ಸೃಜನಶೀಲತೆ,ಪ್ರಯೋಗಶೀಲತೆ ಒಗ್ಗೂಡಿದಾಗ ಮಾತ್ರ ಅಂತಹ ವಿದ್ಯೆ ಶ್ರೇಷ್ಠತೆಯ ಮೌಲ್ಯವನ್ನು ಸಮುದಾಯಕ್ಕೆ ನೀಡುತ್ತದೆ ಎಂದರು.

ಭವಿಷ್ಯತ್ತಿನಲ್ಲಿ ಶಿಕ್ಷಕರಾಗುವ ಬಿಇ ಡಿ ವಿದ್ಯಾರ್ಥಿಗಳು ಮಕ್ಕಳ ಭಾವನೆ ಅರ್ಥೈಸಿಕೊಳ್ಳ ಬೇಕು. ಮಕ್ಕಳು ಶಿಕ್ಷಕರಿಂದ ಪ್ರಭಾವಿತರಾಗ ಬೇಕು. ವೈಜ್ಞಾನಿಕ ಕುತೂಹಲ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಮೌಲ್ಯಗಳನ್ನು ಶಿಕ್ಷಣದ ಅವಿಭಾಜ್ಯ ಅಂಗ. ಇದನ್ನು ಎಲ್ಲರೂ ಅರಿತುಕೊಂಡರೆ ಅಂತಹ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಲು ಸಾಧ್ಯ ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English