ಕಟೀಲು ಮೇಳ ಸರಕಾರೀಕರಣ, ಕಲಾವಿದರಿಗೆ ಸರಕಾರಿ ಸೌಲಭ್ಯಗಳು ?

9:53 PM, Saturday, October 19th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Kateelu-melaಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವನ್ನು ಸರ್ಕಾರದ ವಶಕ್ಕೆ ಪಡೆದು  ಈಗಿರುವ ಗೊಂದಲವನ್ನು ಕಿತ್ತುಹಾಕುವ ಬಗ್ಗೆ ಸರಕಾರ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಜರಾಯಿ ಖಾತೆ ಸಚಿವ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿ ಕೋಟಾ ಶ್ರೀನಿವಾಸ ಪೂಜಾರಿ ನವೆಂಬರ್‌ನಲ್ಲಿ ‌ಕಟೀಲು ಮೇಳ ಹೊರಡುವ ಮೊದಲೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಟೀಲು ಯಕ್ಷಗಾನ ಮೇಳದ ವಿರುದ್ಧ ಕೆಲವರು ‌ನ್ಯಾಯಾಲಯಕ್ಕೆ ಹೋಗಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮೇಳವನ್ನುಏಲಂ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ಮಾಡಬೇಕು ಎಂದು ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯ ಸೂಚನೆ ಬಳಿಕ ದ.ಕ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ ಎಂದಿದ್ದಾರೆ.

ಮೇಳದ ಸರಕಾರಿಕರಣದ  ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ‌ನಡೆಸುತ್ತೇವೆ. ಈ ಬಗ್ಗೆ ಸರ್ಕಾರ ಅಥವಾ ಇಲಾಖೆಯಲ್ಲಿ ಯಾವುದೇ ಗೊಂದಲವಿಲ್ಲ. ನ್ಯಾಯಾಲಯ, ಜಿಲ್ಲಾಧಿಕಾರಿ ವರದಿ ಮತ್ತು ಯಕ್ಷಗಾನ ಕಲಾವಿದರ ಅಭಿಪ್ರಾಯ, ಆಡಳಿತ ಮಂಡಳಿ ಅಭಿಪ್ರಾಯ ಕ್ರೋಢಿಕರಿಸುತ್ತೇವೆ ಎಂದು ಹೇಳಿದ್ದಾರೆ.

 

image description

1 ಪ್ರತಿಕ್ರಿಯೆ - ಶೀರ್ಷಿಕೆ - ಕಟೀಲು ಮೇಳ ಸರಕಾರೀಕರಣ, ಕಲಾವಿದರಿಗೆ ಸರಕಾರಿ ಸೌಲಭ್ಯಗಳು ?

  1. Harish Karinja, Navoor

    ಸರಕಾರದ ಕ್ರಮ ಸರಿಯಾಗಿದೆ. ಕಲಾವಿದರ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಸರಕಾರದ ದಿಟ್ಟ ನಿರ್ಧಾರಕ್ಕೆ ಧನ್ಯವಾದಗಳು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English