ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಮೊದಲ ಗಂಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡುಬರುತ್ತಿದೆ. ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ.
ಮೊದಲ ಬಾರೀ ಮಂಜೇಶ್ವರ ಉಪಚುನಾವಣೆಗೆ ವೇದಿಕೆಯಾಗುತ್ತಿದ್ದು, ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ ನ ಪಿ.ಬಿ.ಅಬ್ದುರ್ರಝಾಕ್ ರವರು ಬಿಜೆಪಿಯ ಕೆ.ಸುರೇಂದ್ರನ್ ವಿರುದ್ಧ ಕೇವಲ 89 ಮತಗಳಿಂದ ಗೆಲುವು ಸಾಧಿಸಿದ್ದರು. ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆ ರಾಷ್ಟ್ರ ಮಟ್ಟದಲ್ಲೇ ಗಮನಸೆಳೆಯುತ್ತಿದೆ.
2,14,799 ಮತದಾರರನ್ನು ಹೊಂದಿರುವ ಮಂಜೇಶ್ವರದಲ್ಲಿ ಕ್ಷೇತ್ರದಲ್ಲಿ 198 ಮತಗಟ್ಟೆಗಳಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ಆರರ ತನಕ ನಡೆಯಲಿದೆ.
20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ 198 ಮತಗಟ್ಟೆಗಳಲ್ಲಿ ಮತದಾರರ ವೀಡಿಯೋ ರೆಕಾರ್ಡಿಂಗ್ ನಡೆಸಲಾಗುತ್ತಿದೆ.
ಎಲ್.ಡಿ.ಎಫ್. ಅಭ್ಯರ್ಥಿ ಎಂ.ಶಂಕರ ರೈರಯವರು ಅಂಗಡಿಮೊಗರು ಹಯರ್ ಸೆಕಂಡರಿ ಶಾಲೆಯ 165ನೇ ಮತಗಟ್ಟೆಯಲ್ಲಿ ಬೆಳಗ್ಗೆ ಮತಚಲಾಯಿಸಿದರು.
ಯುಡಿಎಫ್ ನಿಂದ ಎಂ.ಸಿ.ಖಮರುದ್ದೀನ್, ಎಲ್.ಡಿ.ಎಫ್.ನಿಂದ ಎಂ.ಶಂಕರ ರೈ ಹಾಗೂ ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಸೇರಿದಂತೆ ಒಟ್ಟು ಏಳು ಮಂದಿಯ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
Click this button or press Ctrl+G to toggle between Kannada and English