ಮೈಸೂರು : ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ನಗರ, ಜಿಲ್ಲೆ, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆಎಸ್ಆರ್ ಪಿ ಮತ್ತು ಕೆಎಆರ್ ಪಿ ಘಟಕದ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು.
ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂವಿನ ಗುಚ್ಛವಿಟ್ಟು ಗೌರವ ಅರ್ಪಿಸಿದರು. ಪೊಲೀಸ್ ಸಿಬ್ಬಂದಿಯಿಂದ ವಾಲಿ ಫೈರಿಂಗ್ ಮೂಲಕ ಹುತಾತ್ಮ ಪೊಲೀಸ್ ರಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕರು ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರು ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕೆಪಿಎ ಉಪನಿರ್ದೇಶಕರು ಸುಧೀರ್ ಕುಮಾರ್, ಪೊಲೀಸ್ ಅಧೀಕ್ಷಕರು ಸಿ.ಬಿ.ರಿಷ್ಯಂತ್, ಕೆಎಸ್ಆರ್ ಪಿ 5ನೇ ಪಡೆಯ ಕಮಾಂಡೆಂಟ್ ಕೆ.ಎಸ್.ರಘುನಾಥ್, ಜಿಲ್ಲೆ ಅಪರ ಪೊಲೀಸ್ ಅಧೀಕ್ಷರು ಪಿ.ವಿ.ಸ್ನೇಹ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೆ.ಎನ್.ಮಾದಯ್ಯ ಇತರರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English