ಹಾಸನ : ಹೋಟೆಲ್ ಹಿಂಭಾಗದಲ್ಲಿ ಯುವತಿಯೊಬ್ಬಳ ಮೃತ ದೇಹ

9:49 PM, Monday, October 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

bhavithaಹಾಸನ : ಯುವತಿಯೊಬ್ಬಳ ಮೃತ ದೇಹ ಬಿಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ಬಳಿ ಸೋಮವಾರ ಪತ್ತೆಯಾಗಿದೆ.

ಮೃತ ಯುವತಿಯನ್ನು ಅರಕಲಗೂಡು ಮೂಲದ ಭವಿತಾ (23) ಎಂದು ಗುರುತಿಸಲಾಗಿದೆ.

ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ ಯುವತಿಯ ಮೃತ ದೇಹ ಸೋಮವಾರ ಬೆಳಗ್ಗೆ ಹೋಟೆಲ್ ಹಿಂಭಾಗದಲ್ಲಿ ಪತ್ತೆಯಾಗಿತ್ತು.

ದೇಹದ ಹಲವು ಭಾಗಗಳಿಗೆ ಹಚ್ಚೆ ಹಾಕಿಸಿಕೊಂಡಿರುವ ಭವಿತಾ  ರಟ್ಟೆಯ ಮೇಲೆ ಪುನಿತ್ ಎಂದು ಹಚ್ಚೆ ಹಾಕಿಸಿಕೊಂಡಿರುವುದರಿಂದ ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಅನುಮಾನ ಮೂಡಿದೆ.

bhavitha

ಮಗಳ ಸಾವಿನ ಬಗ್ಗೆ ಪಾಲಕರ ಅನುಮಾನ ವ್ಯಕ್ತ ಪಡಿಸಿದ್ದು ತನಿಖೆ ನಡೆಸುವಂತೆ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಪುನಿತ್ ಯಾರೆಂದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English