ಎರಡು ವಾರ ಕಳೆದರೂ ಪತ್ತೆಯಾಗದ ವಿದ್ಯಾರ್ಥಿನಿ : ಪೋಷಕರಲ್ಲಿ ಆತಂಕ

10:33 AM, Tuesday, October 22nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

fiyoonaಮಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿನಿಯೊರ್ವಳು ನಾಪತ್ತೆಯಾಗಿ ಎರಡು ವಾರ ಕಳೆದರೂ ಇನ್ನೂ ಪತ್ತೆಯಾಗಿಲ್ಲದಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಫಿಯೋನಾ ಸ್ವೀಡಲ್ ಕುಟಿನ್ಹೋ(16) ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿ ಎರಡು ವಾರವಾದರೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಯಾವುದೇ ಮಾಹಿತಿದೊರೆತಿಲ್ಲ. ಮುಡಿಪು ನಿವಾಸಿ ಫಿಯೋನಾ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅ.8ರಂದು ಕಾಲೇಜಿಗೆಂದು ಮನೆಯಿಂದ ಹೊರಟು ಬಂದವರು ಮರಳಿ ಮನೆಗೆ ಮರಳಿಲ್ಲ. ಆಕೆ ಮನೆಯಿಂದ ತೆರಳುವಾಗ ಮೊಬೈಲ್ ಕೂಡಾ ಕೊಂಡೊಯ್ದಿಲ್ಲದಿರುವುದರಿಂದ ಯುವತಿಯ ಕಣ್ಮರೆ ವಿಚಾರ ಪೊಲೀಸರು ನಿದ್ದೆಗೆಡಿಸಿದೆ.

ಮನೆಗೆ ಮಗಳು ಬಾರದಿದ್ದರಿಂದ ಅವಳ ಪೋಷಕರು ಆತಂಕಿತರಾಗಿ ಕೋಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಕೋಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದು ವಿದ್ಯಾರ್ಥಿನಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಮೊಬೈಲ್ ನಂಬರ್ ಆಧಾರದಲ್ಲಿ ಹಿಂದಿನ ಕರೆ ದಾಖಲೆಗಳನ್ನು ಕೂಡಾ ಪರಿಶೀಲನೆ ನಡೆಸಲಾಗಿದೆ. ಇಷ್ಟಾದರೂ ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರತಿಲ್ಲದಿರುವುದು ಇದು ಪೋಷಕರಲ್ಲಿ ಆತಂಕ ಮೂಡಿಸಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English