ಮಂಗಳೂರು : ವಿದ್ಯಾರ್ಥಿದೆಸೆಯಿಂದಲೇ ಮಕ್ಕಳಿಗೆ ನಾಯಕತ್ವ ಗುಣ, ಕೂಡಿಬಾಳುವುದು, ಸಾಮರಸ್ಯದ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ. ಇಲಾಖೆಯ ನಿರ್ದೇಶನದಂತೆ ಸೈಂಟ್ ರೈಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು ಇದರ 7 ದಿನಗಳ ವಾರ್ಷಿಕ ವಿಶೇಷ ಶಿಬಿರವು ಶುಭದ ಸಂಸ್ಥೆಯ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಲ್ಪಾಡಿಯಲ್ಲಿ ನಡೆದು ಸಮಾರೋಪಗೊಂಡಿತು.
ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಶುಭದ ಸಂಸ್ಥೆಯ ನಿರ್ದೇಶಕರಾದ ವಂ| ಭಗಿನಿ ಲೀನಾ ಪಿರೇರಾರವರು ವಹಿಸಿ, ವ್ಯಕ್ತಿತ್ವ ವಿಕಸನದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಎನ್ನೆಸ್ಸಸ್ ಸಹಾಯಕ ಎಂದರು. ಕರ್ಯಕ್ರಮಕ್ಕೆ ಆಗಮಿಸಿದ ರೆ ಫಾ ಆಂಟನಿ ಲೋಬೋ ಧರ್ಮಗುರುಗಳು ಅವರ್ ಲೇಡಿ ಆಫ್ ಪೊಂಪೈ ಧರ್ಮದೇವಾಲಯ ಗುರುಪುರ ಇವರು ಶುಭಾಶೀರ್ವಚನವಿತ್ತರು. ಮುಖ್ಯ ಅತಿಥಿಗಳಾಗಿ ಶ್ರೀ, ಜಿ. ಸುನಿಲ್ ತಾಲುಕು ಪಂಚಾಯತ್ ಸದಸ್ಯರು ಗಂಜಿಮಠ, ಶ್ರೀಮತಿ ಮಾಲತಿ ಎಂ ಅಧ್ಯಕ್ಷರು ಗ್ರಾಮಪಂಚಾಯತ್ ಗಂಜಿಮಠ, ಶ್ರೀ ಝಾಕಿರ್ ಆರ್ ಎಸ್ ಉಪಾಧ್ಯಕ್ಷರು ಗ್ರಾಮಪಂಚಾಯತ್ ಗಂಜಿಮಠ, ಲಯನ್ಸ್ ಕ್ಲಬ್ ಕಾವೂರು ಇದರ ಆಡಳಿತಾಧಿಕಾರಿಗಳಾದ ಶ್ರೀ ದಯಾನಂದ ಶೆಟ್ಟಿ, ಗುರುಪುರ ಕೈಕಂಬ ಲಯನ್ಸ್ ಸದಸ್ಯರಾದ ಶ್ರೀ ಜೆರಾಲ್ಡ್ ಜೆಫ್ರಿಯನ್ ಡಿಸೋಜ ಉಪಸ್ಥಿತರಿದ್ದರು. ಶಿಬಿರಾರ್ಥಿ ಕುಮಾರಿ ಚೈತ್ರ ಹಾಗೂ ಶ್ರಾವ್ಯ 7 ದಿನಗಳ ಕಾರ್ಯಕಲಾಪದ ಸವಿವರವನ್ನು ವರದಿ ರೂಪದಲ್ಲಿ ಮಂಡಿಸಿದರು. ಕುಮಾರಿ ಲಕ್ಶ್ಮಿದೇವಿ, ಮನೀಶ್ ತಮ್ಮ ಅನಿಸಿಕೆಗಳ ಸಾರವನ್ನು ವ್ಯಕ್ತಪಡಿಸಿದರು. ಶ್ರೀ ಝಾಕಿರ್ ಆರ್ ಎಸ್ ಗ್ರಾಮಪಂಚಾಯತ್ ವತಿಯಿಂದ ಶಿಬಿರಾರ್ಥಿಗಳ 4 ತಂಡಕ್ಕೆ ಫಲ್ಗುಣೀ, ನೇತ್ರಾವತಿ, ಕುಮಾರಧಾರಾ, ಚಂದ್ರಗಿರಿ ತಂಡ ಪ್ರಶಸ್ತಿಯನ್ನಿತ್ತು ಗೌರವಿಸಿದರು. ಪ್ರಾಂಶುಪಾಲೆ ಭಗಿನಿ ಸಾಧನಾ ನೆರೆದ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಶ್ರೀ ಅಬ್ದುಲ್ ರೆಹಮಾನ್ ನಿರೂಪಿಸಿದರು. ಸಹಕಾರ್ಯಕ್ರಮಾಧಿಕಾರಿ ಶ್ರೀಮತಿ ಪ್ರಮೀಳಾ ಡಿಸೋಜ ವಂದಿಸಿದರು.
Click this button or press Ctrl+G to toggle between Kannada and English