ಬೆಳ್ತಂಗಡಿ : 2010 ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕಾನೂನು ಜಾರಿಗೊಳಿಸಿತ್ತು. 2014ರಲ್ಲಿ ಕಾಂಗ್ರೆಸ್ ಆಡಳಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತಕ್ಷಣವೇ ಆ ಕಾನೂನನ್ನು ರದ್ದುಗೊಳಿಸಿತ್ತು. ಈಗ ಪುನಃ ಸುದೈವದಿಂದ ಭಾರತೀಯ ಜನತಾಪಕ್ಷವು ಅಧಿಕಾರದಲ್ಲಿದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದಲ್ಲಿ ಪುನಃ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಮತ್ತು ಗೋಮಾಂಸ ಮಾರಾಟ ಮತ್ತು ಸಾಗಾಣಿಕೆಯ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಶ್ರೀ ಹರೀಶ್ ಎಮ್ ಇವರು ಮನವಿ ಮಾಡಿದರು. ಅವರು ಈ ಸ್ಥಳದಲ್ಲಿ ಕೈಗೊಳ್ಳಲಾಗಿದ್ದ ರಾಷ್ಟ್ರೀಯ ಹಿಂದೂ ಆಂದೋಲನದ ಸ್ಥಳದಲ್ಲಿ ಮಾತನಾಡುತ್ತಾ- ಗೋವುಗಳ ಕಳ್ಳ ಸಾಗಾಣಿಕೆ ಮಾಡುವವರನ್ನು ತಡೆಯುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯನ್ನು ಒದಗಿಸಬೇಕು, ಹಿಂದೂ ಕಾರ್ಯಕರ್ತರ ಮೇಲಾಗಿರುವ ಆಕ್ರಮಣಗಳಲ್ಲಿ ಸಂಬಂಧಿಸಿದ ಗೋವುಗಳ ಕಳ್ಳಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಮುಂತಾದ ಬೇಡಿಕೆಗಳನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳದ ಮುಖಂಢರಾದ ಶ್ರೀ ದಿನೇಶ ಮತ್ತು ಶ್ರೀ ರಾಮ ಸೇನೆಯ ಶ್ರೀ ಲೋಕೇಶ ಕುತ್ತಾರ್ ಉಪಸ್ಥಿತರಿದ್ದರು.ನಂತರ ಈ ಕುರಿತು ಬೆಳ್ತಂಗಡಿ ಉಪ ತಹಶಿಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭ ಧರ್ಮಾಭಿಮಾನಿಗಳಾದ ಕಾಯರ್ತಡ್ಕ ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಕುಶಾಲಪ್ಪ ಗೌಡ, ಪದ್ಮನಾಭ ಗೌಡ, ವಿಶ್ವಹಿಂದು ಪರಿಷತ್ ನಗರ ಘಟಕ ಬೆಳ್ತಂಗಡಿ ಇದರ ಅದ್ಯಕ್ಷರಾದ ದೇವರಾಜ ಲಾಯಿಲ, ಕಾರ್ಯದರ್ಶಿ ಪ್ರಶಾಂತ್ ಬೆಳ್ತಂಗಡಿ, ಚಿರಂಜೀವಿ ಯುವಕ ಮಂಡಲ ಕಾನರ್ಪದ ಪ್ರಮುಖರಾದ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English