ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಪಿ.ಯುಕಾಲೇಜಿನ 7ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆಯಲ್ಲಿ ಚಾಂಪಿಯನ್

5:23 PM, Tuesday, October 22nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

karateಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಹಾಗೂ ಶಕ್ತಿ ಪಿ.ಯುಕಾಲೇಜಿನ 7ವಿದ್ಯಾರ್ಥಿಗಳು ವಾಮಂಜೂರಿನ ಸಂತರೈಮಂಡ್ಸ್ ಶಾಲೆಯಲ್ಲಿ ಜೆಎಸ್‌ಕೆಎ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಮಂಗಳೂರು ಮುಕ್ತ ಕರಾಟೆ ಚಾಂಪಿಯನ್‌ಶಿಪ್ 2019 ಕರಾಟೆಯಲ್ಲಿ ಚಾಂಪಿಯನ್‌ ಆಗಿರುತ್ತಾರೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು 6 ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಶಕ್ತಿ ಶಾಲೆಯ ವಿದ್ಯಾರ್ಥಿಗಳಾದ ನಾಫಿ ಶೇಖ್‌ಕಟ ಮತ್ತು ಕುಮಿಟೆ ಕರಾಟೆಯಲ್ಲಿ ಚಿನ್ನ ಮತ್ತು ಕಂಚು, ಚಿರಂತ್‌ಎನ್‌ಎಮ್‌ಕೆ ಕುಮಿಟೆ ಕರಾಟೆಯಲ್ಲಿ ಬೆಳ್ಳಿ ಮೆಹಫೂಝ್‌ ರೂಮಿಕಟ ಕರಾಟೆಯಲ್ಲಿ ಬೆಳ್ಳಿ, ನೆಹಶಲ್‌ ಕುಮಿಟೆ ಕರಾಟೆಯಲ್ಲಿ ಕಂಚು, ತಮೀಮ್‌ರೂಮಿ ಮತ್ತು ರಿಜುಲ್‌ಕಟದಲ್ಲಿ ಕಂಚು ಪಡೆದಿರುತ್ತಾರೆ ಹಾಗೂ ಶಕ್ತಿ ಪಿ.ಯುಕಾಲೇಜಿನ ಅಜಂಲಿ ಜೋಗಿ ಕುಮಿಟೆಯಲ್ಲಿಚಿನ್ನ, ಕಟದಲ್ಲಿ ಕಂಚು ಪಡೆದು ಶಾಲೆಗೆ ಕೀರ್ತಿತಂದಿರುತ್ತಾರೆ. ಇವರನ್ನು ಶಾಲೆಯ ಸಂಸ್ಥಾಪಕರಾದ ಕೆ.ಸಿ ನಾಕ್, ಪ್ರಧಾನ ಸಲಹೆಗಾರರಮೇಶ್ ಕೆ. ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರಜಿ.ಎಸ್, ಕರಾಟೆ ತರಭೇತುದಾರ ಅರ್ಜುನ್ ಶೆಟ್ಟಿ ಅಭಿನಂದಿಸಿದರು.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English