ಮಂಗಳೂರು : ರಾಜ್ಯ ಚುನಾವಣೆ ಆಯೋಗವು ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ ಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆ 60 ವಾರ್ಡ್ ಗಳಿಗೆ ನವೆಂಬರ್ 12ನೇ ತಾರೀಕು ಮತದಾನ ನಡೆಯಲಿದೆ.
ಅಕ್ಟೋಬರ್ 20ನೇ ತಾರೀಕು ಭಾನುವಾರದಿಂದ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿ ಆಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ 24.10.2019 ನಾಮಪತ್ರ ಸಲ್ಲಿಸಲು ಕೊನೆ ದಿನ 31.10.2019 ನಾಮಪತ್ರ ಪರಿಶೀಲಿಸಲು ಕೊನೆ ದಿನ 2.11.2019 ನಾಮಪತ್ರ ವಾಪಸ್ ಪಡೆಯುವುದಕ್ಕೆ ಕೊನೆ ದಿನ 4.11.2019 ಮತದಾನ ನಡೆಯುವ ದಿನ 12.11.2019 ಅಗತ್ಯ ಇದ್ದಲ್ಲಿ ಮರು ಮತದಾನ ನಡೆಯುವ ದಿನ 13.11.2019 ಮತ ಎಣಿಕೆ ದಿನ 14.11.2019.
ಉಳಿದಂತೆ ದಾವಣಗೆರೆ ಮಹಾನಗರ ಪಾಲಿಕೆ, ರಾಮನಗರ ಜಿಲ್ಲೆ ಕನಕಪುರ ನಗರಸಭೆ ಮಾಗಡಿ ಪುರಸಭೆ ಕೋಲಾರ ಜಿಲ್ಲೆ ಕೋಲಾರ ನಗರಸಭೆ ಮುಳಬಾಗಲು ನಗರಸಭೆ ರಾಬರ್ಟ್ ಸನ್ ಪೇಟೆ (ಕೆಜಿಎಫ್) ನಗರಸಭೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆ ಚಿಂತಾಮಣಿ ನಗರಸಭೆ ಶಿವಮೊಗ್ಗ ಜಿಲ್ಲೆ ಜೋಗ್- ಕಾರ್ಗಲ್ ಪಟ್ಟಣ ಪಂಚಾಯಿತಿ ಚಿಕ್ಕಮಗಳೂರು ಜಿಲ್ಲೆ ಬೀರೂರು ಪುರಸಭೆ ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣ ಪಂಚಾಯಿತಿ ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ ಕೂಡ್ಲಿಗಿ ಪಟ್ಟಣ ಪಂಚಾಯಿತಿ.
Click this button or press Ctrl+G to toggle between Kannada and English