ಕನ್ನಡದಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯ: ಪ್ರದೀಪಕಲ್ಕೂರ ಆಗ್ರಹ

2:39 PM, Wednesday, October 23rd, 2019
Share
1 Star2 Stars3 Stars4 Stars5 Stars
(No Ratings Yet)
Loading...

Kannada ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ವಾಣಿಜ್ಯ ಮಳಿಗೆ, ವಸತಿ ಸಂಕೀರ್ಣ ವಾಣಿಜ್ಯ ಸಂಕೀರ್ಣ, ಸಂಘ, ಸಂಸ್ಥೆ ಹೀಗೆ ಎಲ್ಲಾ ಸಂಸ್ಥೆಗಳಲ್ಲೂ ನಾಮ ಫಲಕಗಳನ್ನು ಕಡ್ಡಾಯವಾಗಿಕನ್ನಡ ಭಾಷೆಯಲ್ಲೇ ಪ್ರದರ್ಶಿಸುವಂತೆ ಆದೇಶ ಹೊರಡಿದುವಂತೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.

ಈ ಕುರಿತು ಪರಿಷತ್ತಿನಜಿಲ್ಲಾಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಮಂಗಳೂರು ಮಹಾನಗರ ಪಾಲಿಕೆಯಆಯುಕ್ತರಾಗಿರುವ ಶಾನಾಡಿಅಜಿತ್‌ಕುಮಾರ್ ಹೆಗ್ಡೆಯವರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯು ನವೆಂಬರ್ 1 ರೊಳಗೆ ಕನ್ನಡದಲ್ಲೇ ನಾಮಫಲಕಗಳನ್ನು ಪ್ರದರ್ಶಿಸುವ ಕುರಿತುಆದೇಶ ನೀಡಿದ್ದುಇದು ರಾಜ್ಯದಾದ್ಯಂತಜಾರಿಗೆ ಬರುವಂತಾಗಲಿ, ರಾಜ್ಯದ ಪ್ರಮುಖ ನಗರಗಳಲ್ಲೊಂದಾದ ಮಂಗಳೂರಿನಲ್ಲೂ ಈ ಕುರಿತು ದಿಟ್ಟಕ್ರಮ ಕೈಗೊಳ್ಳುವಂತಾಗಲೆಂದು ಕಲ್ಕೂರ ಆಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English