ಗುಜರಾತ್​ ಉಪಚುನಾವಣೆಯ ಮತ ಎಣಿಕೆ : ತಲಾ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್, ಬಿಜೆಪಿ

1:32 PM, Thursday, October 24th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

gujaratಅಹಮದಾಬಾದ್ : ಗುಜರಾತ್ನ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಗುರುವಾರ ಪ್ರಕಟವಾಗುತ್ತಿದ್ದು, ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ಮೂರರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ.

ಪಟನ್ ಜಿಲ್ಲೆಯ ರಾಧಾನ್ಪುರ ಕ್ಷೇತ್ರದಲ್ಲಿ ಒಬಿಸಿ ನಾಯಕ ಬಿಜೆಪಿ ಅಭ್ಯರ್ಥಿ ರಘು ದೇಸಾಯಿ ಕಾಂಗ್ರೆಸ್ನ ಅಲ್ಪೇಶ್ ಠಾಕೂರ್ ವಿರುದ್ಧ 3,000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಅರಾವಳಿಯ ಬಯಾಡ್ನಲ್ಲಿ ಬಿಜೆಪಿ ಅಭ್ಯರ್ಥಿ ಧವಲಸಿಂಗ್ ಝಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಜಸು ಪಟೇಲ್ ಎದುರು 6,600 ಮತಗಳ ಹಿನ್ನಡೆ ಕಂಡಿದ್ದಾರೆ.

ಅಹಮದಾಬಾದ್ನ ಅಮ್ರೈವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಧರ್ಮೇಂದ್ರ ಪಟೇಲ್ ಅವರು ಬಿಜೆಪಿಯ ಜಗದೀಶ್ ಪಟೇಲ್ ವಿರುದ್ಧ 200 ಮತಗಳ ಮುನ್ನಡೆಯಲ್ಲಿದ್ದಾರೆ.

ಮೆಹ್ಸಾನಾದ ಖೇರಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಜಮಲ್ಜಿ ಠಾಕೂರ್ ಕಾಂಗ್ರೆಸ್ನ ಬಾಬುಜಿ ಠಾಕೂರ್ ವಿರುದ್ಧ 20,000 ಮತಗಳ ಮುನ್ನಡೆಯಲ್ಲಿದ್ದಾರೆ.

ಬಾನಸ್ಕಾಂತದ ಥಾರಾಡ್ನಲ್ಲಿ ಬಿಜೆಪಿ ಜೀವರಾಜ್ ಪಟೇಲ್ ಕಾಂಗ್ರೆಸ್ಸಿನ ಗುಲಾಬ್ಸಿನ್ಹ ರಜಪೂತ್ ವಿರುದ್ಧ 1,400ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದಕೊಂಡಿದ್ದಾರೆ.

ಮಹಿಸಾಗರ್ನ ಲುನಾವಡಾದಲ್ಲಿ ಬಿಜೆಪಿ ಅಭ್ಯರ್ಥಿ ಜಿಗ್ನೇಶ್ ಸೇವಕ್ ಕಾಂಗ್ರೆಸ್ ಅಭ್ಯರ್ಥಿ ಗುಲಾಬ್ಸಿನ್ಹ ಚೌಹಾಣ್ ವಿರುದ್ಧ 9,600 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English