ಹವಾಮಾನ ಇಲಾಖೆ : ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

10:04 AM, Saturday, October 26th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

meenugarikeಮಂಗಳೂರು : ಅರಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾ ಕ್ಷೇತ್ರ ತತ್ತರಿಸಿದೆ.

ಮೀನುಗಾರಿಕೆಯ ರಜೆಯ ಅವಧಿ ಮುಗಿದು ಋತು ಆರಂಭವಾದಗಿನಿಂದಲೂ ಚಂಡಮಾರುತ, ಮೀನಿನ ಅಲಭ್ಯತೆ ಯಿಂದಾಗಿ ಕರಾವಳಿಯ ಮೀನುಗಾರಿಕೆಗೆ ತೊಂದರೆಯಾಗುತ್ತಿದ್ದು, ಪರ್ಸಿನ್‌, ಯಾಂತ್ರೀಕೃತ ಬೋಟುಗಳು ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಚಂಡಮಾರುತದಿ ಂದಾಗಿ ರೆಡ್‌ ಅಲರ್ಟ್‌ ಘೋಷಿಸಿರುವುದು ಮೀನುಗಾರಿಕೆಗೆ ಮತ್ತಷ್ಟು ಹೊಡೆತ ನೀಡಿದೆ.

ಇದೀಗ ಮತ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.ಜಿಲ್ಲೆಯಲ್ಲಿ 1,134 ಪಸೀìನ್‌ ಮತ್ತು ಟ್ರಾಲ್‌ ಬೋಟ್‌, 1,396 ಗಿಲ್‌ನೆಟ್‌ ಬೋಟ್‌, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳುವ ಸಂದರ್ಭ ಇಂಧನ, ಕೆಲಸಗಾರರ ವೆಚ್ಚ, ಬೋಟಿನ ತಪಾಸಣೆ ಸಹಿತ ಇನ್ನಿತರ ಖರ್ಚುಗಳು ಸೇರಿ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಮೀನುಗಾರರು.

ಮೀನುಗಾರಿಕಾ ಬೋಟಿನಲ್ಲಿ ಭಾಗಶಃ ಉತ್ತರ ಭಾಗದ ಕೆಲಸಗಾರರು ಇರುವುದರಿಂದ ಅವರು ಈಗಾಗಲೇ ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಅವರಿಗೆ ಮೀನುಗಾರಿಕೆಗೆ ತೆರಳಿದಾಗ ಅದರಲ್ಲಿ ಬರುವ ಲಾಭದ ಶೇಕಡಾವಾರು ಹಣ ನೀಡಲಾಗುತ್ತದೆ. ಈಗ ಮೀನುಗಾರಿಕೆಗೆ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ಹಲವು ಬೋಟುಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಇದರಿಂದ ಅವರು ಕೆಲಸವಿಲ್ಲದೆ ಊರಿಗೆ ತೆರಳಿದ್ದಾರೆ.

ಈ ವರ್ಷಾರಂಭದಿಂದಲೇ ಮೀನುಗಾರಿಕೆಗೆ ಹಲವು ಸಮಸ್ಯೆಗಳು ಎದುರಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ದೊರೆತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಮೀನುಗಾರಿಕೆಗೆ ವೇಳೆ ಬಾಕಿ ಮೀನುಗಿಂತಲೂ ಹೆಚ್ಚಾಗಿ ನಿರುಪಯುಕ್ತ ಕಾರ್ಗಿಲ್‌ ಮೀನುಗಳು ಟನ್‌ಗಟ್ಟಲೇ ಸಿಗುತ್ತಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾರ್ಗಿಲ್‌ ಮೀನು ಇತರ ಮೀನುಗಳನ್ನು ತಿನ್ನುವುದರಿಂದ ಅವುಗಳಿರುವಲ್ಲಿ ಮನುಷ್ಯರಿಗೆ ತಿನ್ನಲು ಯೋಗ್ಯವಾದ ಮೀನುಗಳು ಇರುವುದಿಲ್ಲ. ಕಾರ್ಗಿಲ್‌ ಮೀನುಗಳನ್ನು ಫಿಶ್‌ಮಿಲ್‌ನವರು ಕೆ.ಜಿ.ಗೆ 12 ರೂ. ನಂತೆ ಖರೀದಿ ಮಾಡುತ್ತಿದ್ದಾರೆ. 15ರಿಂದ 20 ನಾಟಿಕಲ್‌ ದೂರದಲ್ಲೇ ಈ ಮೀನುಗಳು ಸಿಗುತ್ತಿವೆ. ಆಳಸಮುದ್ರ ಮೀನುಗಾರಿಕೆ ಹೋಗಿ ಬರಲು 5 ಲಕ್ಷ ರೂ. ಡಿಸೇಲ್‌ ಬೇಕಾಗುತ್ತಿದ್ದು, ಕಾರ್ಗಿಲ್‌ ಮೀನು ಸಿಗುತ್ತಿರುವುದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ.

ಹವಾಮಾನ ಏರಿಳಿತದಿಂದಾಗಿ ಸಮುದ್ರದಲ್ಲಾಗುತ್ತಿರುವ ಬದಲಾವಣೆಯಿಂದ ಈ ಬಾರಿ ನಿರೀಕ್ಷಿತ ಮೀನುಗಾರಿಕೆಯಾಗಿಲ್ಲ. ಬಹುತೇಕ ಬೋಟುಗಳು ನಷ್ಟದಲ್ಲಿದೆ. ಕೆಲಸದವರು ವಾಪಾಸ್‌ ಊರಿಗೆ ತೆರಳಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English