ಸುರತ್ಕಲ್ : ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್(ಮುಕ್ಕ) ಅಕ್ರಮ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನವೆಂಬರ್ ಹದಿನೈದಕ್ಕೆ ಮುಕ್ತಾಯಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆಯನ್ನು ನವೀಕರಿಸದೆ, ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡ ತೀರ್ಮಾನದಂತೆ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸಬೇಕು, ಹಾಗೂ ಹೆದ್ದಾರಿ ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್, ನಂತೂರು ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕು, ದುರ್ಬಲಗೊಂಡು ಸಂಚಾರಕ್ಕೆ ಅಯೋಗ್ಯಗೊಂಡಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ
ಐದು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರು ತಿಂಗಳ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಕೇಂದ್ರವನ್ನು ಜನತೆಯ ಸತತ ಪ್ರತಿಭಟನೆಯ ನಂತರವೂ ಅಕ್ರಮವಾಗಿ ಮುಂದುವರಿಸಲಾಗುತ್ತಿದೆ. ಜನತೆಯ ಪ್ರತಿಭಟನೆ ತೀವ್ರಗೊಂಡ ನಂತರ 2018 ರ ಜನವರಿಯಲ್ಲಿ ಸುರತ್ಕಲ್ ಟೋಲ್ ಕೇಂದ್ರವನ್ನು ತಕ್ಷಣವೇ ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ಅಧಿಕೃತ ತೀರ್ಮಾನವನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿದೆ. ಆದರೂ ಕಳೆದ ಎರಡು ವರ್ಷಗಳಿಂದ ಮೂರು ತಿಂಗಳು, ಆರು ತಿಂಗಳು, ಒಂದು ವರ್ಷದ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನೀಡಲಾಗುತ್ತಿದೆ. ಇದು ಅಕ್ರಮ ಮಾತ್ರವಲ್ಲದೆ ಸ್ವತಹ ಹೆದ್ದಾರಿ ಪ್ರಾಧಿಕಾರ ತನ್ನ ತೀರ್ಮಾವನ್ನೇ ಉಲ್ಲಂಘಿಸಿ ಜನತೆಗೆ ಮಾಡುವ ಅನ್ಯಾಯವಾಗಿದೆ. ಈ ರೀತಿ ಟೋಲ್ ಸಂಗ್ರಹದ ವಿರುದ್ದ, ಹಾಗೂ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜೊತೆಗೆ ವಿಲೀನಗೊಳಿಸುವ ನಿರ್ಧಾರವನ್ನು ತಕ್ಷಣ ಜಾರಿಗೊಳಿಸಬೇಕು, ಹೆದ್ದಾರಿ ಗುಂಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸತತ ಹೋರಾಟ ನಡೆಸುತ್ತಿದೆ. ಕಳೆದ ವರ್ಷದ ಆಗಸ್ಟ್ ನಿಂದ ಪಾದಯಾತ್ರೆ, ಪ್ರತಿಭಟನಾ ಸಭೆ, 11 ದಿನಗಳ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ಸಹಿತ ಸತತ ಪ್ರತಿಭಟನೆಗಳು ನಡೆದುದನ್ನು ಈ ಸಂದರ್ಭ ತಮ್ಮ ಗಮನಕ್ಕೆ ತರ ಬಯುಸುತ್ತೇವೆ.
ಈ ಪ್ರಬಲ ಜನ ಹೋರಾಟಗಳ ಸಂದರ್ಭ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಹೆದ್ದಾರಿ ಸಚಿವರ ಆಪ್ತ ಕಾರ್ಯದರ್ಶಿ ಸುರತ್ಕಲ್ ಟೋಲ್ ಕೇಂದ್ರ ಎತ್ತಂಗಡಿಯ ತೀರ್ಮಾನಕ್ಕೆ ಬದ್ದ ಎಂಬ ಭರವಸೆಯನ್ನು ಬಹಿರಂಗವಾಗಿ ನೀಡಿದ್ದರು.
ಆದರೂ ಹೆದ್ದಾರಿ ಪ್ರಾಧಿಕಾರ ತನ್ನ ತೀರ್ಮಾನವನ್ನು ಜಾರಿಗೊಳಿಸದೆ ಸುರತ್ಕಲ್ ಅಕ್ರಮ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹವನ್ನು ನಿಯಮ ಬಾಹಿರವಾಗಿ ಮುಂದುವರಿಸಿದೆ. ಈಗ ನವಂಬರ್ 15 ಕ್ಕೆ ಟೋಲ್ ಸಂಗ್ರಹದ ಗುತ್ತಿಗೆ ಅವಧಿ ಮುಗಿಯುತ್ತದೆ. ಈ ಬಾರಿ ಯಾವುದೇ ಕಾರಣಕ್ಕೂ ಗುತ್ತಿಗೆಯನ್ನು ನವೀಕರಿಸುವುದೊ, ಹೊಸದಾಗಿ ಟೋಲ್ ಸಂಗ್ರಹ ಗುತ್ತಿಗೆಗೆ ಟೆಂಡರ್ ಕರೆಯುವುದನ್ನೊ ಮಾಡದೆ, ತಾತ್ಕಾಲಿಕ ನೆಲೆಯ ಟೋಲ್ ಕೇಂದ್ರವನ್ನು ಮುಚ್ಚಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ. ಜೊತೆಗೆ ಚಿಂತಾಜನಕ ಸ್ಥಿತಿಯಲ್ಲಿರುವ ಸುರತ್ಕಲ್ ನಂತೂರು ಹೆದ್ದಾರಿಯನ್ನು ದುರಸ್ಥಿಗೊಳಿಸಬೇಕು, ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕು, ಕೂಳೂರು ದುರ್ಬಲ ಸೇತುವೆಗೆ ಬದಲಿಯಾಗಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಬೇಕು ಎಂದು ವಿನಂತಿಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಕಡೆಗಣಿಸಿದರೆ ತೀವ್ರ ರೀತಿಯ ಹೋರಾಟಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ.
“ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ನವಂಬರ್ 15 ಕ್ಕೆ ಕೊನೆಗೊಳ್ಳುವ ಸುರತ್ಕಲ್ ಟೋಲ್ ಗೇಟ್ ಗುತ್ತಿಗೆಯನ್ನು ನವೀಕರಿಸಬಾರದು, ಹಾಗೂ ಹೆದ್ದಾರಿ ಗುಂಡಿಗಳನ್ನು ತಕ್ಷಣ ಮುಚ್ಚುವಂತೆ ಒತ್ತಾಯಿಸಿ ಇಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶಿಶು ಮೋಹನ್ ಗೆ ಮನವಿ ಸಲ್ಲಿಸಿತು”.
ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ವಿಜಯ ಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಕುಳಾಯಿ ಗಂಗಾಧರ ಭಂಜನ್ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್ ಹೋರಾಟ ಸಮಿತಿ ಪ್ರಮುಖರಾದ ಶ್ರೀಮಾಥ್ ಕುಲಾಲ್, ನಿತಿನ್ ಬಂಗೇರ, ಅಜ್ಮಾಲ್ ಅಹ್ಮದ್, ಜನಾರ್ಧನ ಸಾಲ್ಯಾನ್ ಕುಳಾಯಿ ಹಾಜರಿದ್ದರು.
Click this button or press Ctrl+G to toggle between Kannada and English