ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

3:29 PM, Saturday, October 26th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

chandamaaruthaಮಂಗಳೂರು : ಕ್ಯಾರ್ ಚಂಡಮಾರುತ ಪರಿಣಾಮ, ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡು ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇನ್ನೊಂದೆಡೆ ಶುಕ್ರವಾರ ದಿನವಿಡೀ ಸುರಿದ ಭಾರಿ ಗಾಳಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಅರಬ್ಬಿ ಸಮುದ್ರದಲ್ಲಿ ನಿರ್ಮಾಣವಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮುಂಜಾನೆ 5.30ರ ವೇಳೆಗೆ ಚಂಡಮಾರುತವಾಗಿ ಪರಿತರ್ವನೆಗೊಂಡು ಉತ್ತರಕ್ಕೆ ಸಂಚರಿಸಿದೆ. ಮಧ್ಯಾಹ್ನ 2.30ರ ವೇಳೆಗೆ 16.2ಡಿಗ್ರಿ ಉತ್ತರ ಅಕ್ಷಾಂಶ ಮತ್ತು 71.7ಡಿಗ್ರಿ ಪೂರ್ವ ರೇಖಾಂಶದಲ್ಲಿ ಪೂರ್ವ ಮಧ್ಯ ಸಮುದ್ರಲ್ಲಿ ಕೇಂದೀಕೃತವಾಗಿತ್ತು. ಪ್ರಸ್ತತ ಒಮಾನ್ ತೀರದಿಂದ 1880 ಕಿ.ಮೀ.ದೂರದಲ್ಲಿದ್ದು, ಪ್ರತಿ ಕ್ಷಣಕ್ಕೂ ತೀವ್ರಗೊಳ್ಳುತ್ತಿದ್ದು, 12 ಗಂಟೆಯಲ್ಲಿ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ. ಪೂರ್ವ ಕೇಂದ್ರ ಅರಬ್ಬಿ ಸಮುದ್ರದಿಂದ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇರುವುದರಿಂದ ಭಾರತ ಕರಾವಳಿಯಿಂದ ಮಾರುತ ದೂರ ಸಾಗಲಿದೆ ಎಂದು ಹವಾಮಾನ ಇಲಾಖೆ ಮತ್ತು ಸಮುದ್ರ ಅಧ್ಯಯನ ಸಂಸ್ಥೆ ಐಎನ್‌ಸಿಒಐಎಸ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ದ.ಕ. ಜಿಲ್ಲೆಯ ಒಳನಾಡಿನಲ್ಲೂ ಉತ್ತಮ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮರಗಳು, ವಿದ್ಯುತ್ ಕಂಬಗಳು, ನೆಲಕ್ಕುರುಳಿದ್ದು, ದಿನವಿಡಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿವೆ. ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆಯಾದ್ಯಂತ ಎಡೆಬಿಡದೆ ಮಳೆಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗು ಪ್ರದೇಶಗಳ ಜನರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ದಿನದ ಮಳೆ 82.5 ಮಿ.ಮೀ: ಶುಕ್ರವಾರ ಬೆಳಗ್ಗಿನಿಂದ ರಾತ್ರಿ 7.30ರವರೆಗೆ ದ.ಕ ಜಿಲ್ಲೆಯಲ್ಲಿ 82.5 ಮಿ.ಮೀ.ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 32.4 ಮಿ.ಮೀ.ಮಳೆಯಾಗಿದೆ. ಬಂಟ್ವಾಳ 38.3, ಬೆಳ್ತoಗಡಿ 39.5, ಮಂಗಳೂರು 34.5, ಪುತ್ತೂರು 28.5, ಸುಳ್ಯದಲ್ಲಿ 21.2 ಮಿ.ಮೀ.ಮಳೆ ದಾಖಲಾಗಿದೆ.

ಮುಂಗಾರು ಮಳೆ ಬಳಿಕ ದೂರಕ್ಕೆ ಹೋಗಿದ್ದ ಸಮುದ್ರ ಮತ್ತೆ ಭೂ ಪ್ರದೇಶದತ್ತ ಬಂದು, ಅಬ್ಬರಿಸುತ್ತಿದೆ. ಸಮುದ್ರ ತೀರದ ಹಲವು ತೆಂಗಿನ ಮರಗಳು ಹಾಗೂ ಇತರ ಮರಗಳು ನೆಲಕ್ಕುರುಳಿದ್ದು, ರಕ್ಕಸಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರ ತಟದ ಹಲವು ಮನೆಗಳು ಅಪಾಯದ ಅಂಚಿನಲ್ಲಿದ್ದು, ಅದರಲ್ಲಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಸಿಗರನ್ನು ಸಮುದ್ರಕ್ಕೆ ಇಳಿದಂತೆ ತಡೆಯಲು ಜಿಲ್ಲಾಡಳಿತ ಪೊಲೀಸ್ ಹಾಗೂ ಹೋಮ್‌ಗಾರ್ಡ್ ಕಿನಾರೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಹೆಚ್ಚಿನ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ನವ ಮಂಗಳೂರು ಬಂದರು ಪ್ರವೇಶಿಸುವ ಬಾಗಿಲಿನಲ್ಲಿ 200ಕ್ಕೂ ಅಧಿಕ ಬೋಟ್‌ಗಳು ನಿಂತಿರುವುದು ಕೋಸ್ಟ್‌ಗಾರ್ಡ್ ನೌಕೆಗಳು ಸಮುದ್ರದಲ್ಲಿ ರಕ್ಷಣೆ ಹಾಗೂ ಹುಡುಕಾಟ ಕಾರ್ಯಾಚರಣೆಗೆ ತೆರಳಲು ಅಡಚಣೆಯಾಗಿದೆ. ಬೋಟ್‌ಗಳನ್ನು ಬಂದರ್‌ನಲ್ಲಿ ಲಂಗರು ಹಾಕಿಸಲು ಪ್ರಯತ್ನ ನಡೆದಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English