ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದ ಸೋನಿಯ ಗಾಂಧಿ

1:50 PM, Friday, October 19th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Sonia Kudroliಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ ಸಮಾರಂಭ ಹಾಗೂ ಮಂಗಳೂರು ದಸರವನ್ನು ಎಐಸಿಸಿ ಅಧ್ಯಕ್ಷೆಯಾದ ಸೋನಿಯ ಗಾಂಧಿಯವರು ಗುರುವಾರ ಉಧ್ಘಾಟಿಸುವ ಮೂಲಕ ಮಂಗಳೂರು ದಸರಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಕುದ್ರೋಳಿ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಹಾಗೂ ಆಡಳಿತ ಮಂಡಳಿ ನೇತ್ರತ್ವದಲ್ಲಿ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಾದ ಜಾತ್ಯಾತೀತ ಪರಿಕಲ್ಪನೆ, ಸಾಮಾಜಿಕ ಪರಿವರ್ತನೆ ಕಾರ್ಯಗಳು ಇನ್ನಷ್ಟು ಬಲಿಷ್ಠವಾಗಿ ಮುಂದುವರಿಯಲಿ ಎಂದು ಹಾರೈಸಿದರು.

19ನೇ ಶತಮಾನದಲ್ಲಿ ನಾರಾಯಣ ಗುರುಗಳು ಪ್ರವರ್ತಿಸಿದ ಮಹಾನ್ ಸಿದ್ಧಾಂತಗಳಾದ ಜಾತ್ಯಾತೀತತೆ, ಬಡವರಿಗೆ ನೆರವು, ಶಿಕ್ಷಣ ಕ್ರಾಂತಿ ವಿಶ್ವಮಾನ್ಯತೆ ಗಳಿಸಿವೆ. ಕೇರಳದಲ್ಲಿ 100ಕ್ಕೂ ಹೆಚ್ಚು ದೇವಸ್ಥಾನ ಹಾಗೂ ಮಂಗಳೂರಿನಲ್ಲಿ ಈ ಪವಿತ್ರ ಕ್ಷೇತ್ರವನ್ನು 100 ವರ್ಷಗಳ ಹಿಂದೆಯೇ ಸ್ಥಾಪಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು. ಈಗ ಇಲ್ಲಿ ನಡೆಯುತ್ತಿರುವ ಎಲ್ಲಾ ಸಾಮಾಜಿಕ ಸದಾಶಯದ ಕಾರ್ಯಕ್ರಮಗಳ ಬಗ್ಗೆ ಮತ್ತು ಕ್ಷೇತ್ರಕ್ಕೆ ಈ ದಿನ ಭೇಟಿ ನೀಡುವ ಬಗ್ಗೆ ತನಗೆ ತುಂಬು ಸಂತಸವಾಗಿದೆ ಎಂದರು.

Sonia Kudroli1991 ರಲ್ಲಿ ನವೀಕೃತಗೊಂಡ ಈ ಕ್ಷೇತ್ರದ ಉದ್ಘಾಟನೆಯನ್ನು ನನ್ನ ಗಂಡ ದಿವಂಗತ ರಾಜೀವ್ ಗಾಂಧಿ ಯವರು ನಡೆಸಿದ್ದರು ಈ ಹಿನ್ನಲೆಯಿಂದ ನನಗೆ ಇದು ಬಹಳ ವಿಶೇಷವಾದ ಕ್ಷೇತ್ರವಾಗಿದೆ ಎಂದರು. ಭಾರತವು ತನ್ನದೇ ಆದ ವಿಶೇಷ ಪರಂಪರೆಯನ್ನು ಹೊಂದಿದ್ದು ಇದರ ರಕ್ಷಣೆ ನಮ್ಮೆಲರ ಆದ್ಯ ಕರ್ತವ್ಯವಾಗಿದೆ, ನಾರಾಯಣ ಗುರು ಸ್ವಾಮಿಗಳು ಶಾಂತಿ, ಆಶಾಕಿರಣ, ಮಾನವೀಯತೆಯ ಅದ್ಭುತ ಕೆಲಸಗಳನ್ನು ನಡೆಸಿದವರು. ಆದ್ದರಿಂದ ಇಂತಹ ಸಂದೇಶಗಳ ಅನುಷ್ಠಾನದ ಜತೆಗೆ ಸಾಮಾಜಿಕ ಅನುಷ್ಠಾನದ ಕಾರ್ಯಗಳು ಕೂಡ ನಮ್ಮ ಎಲ್ಲಾ ಆಚರಣೆಗಳಿಗೆ ಸ್ಪೂರ್ತಿಯಾಗಲಿ ಎಂದರು.

ಜನಾರ್ಧನ ಪೂಜಾರಿಯವರು ಈ ಕ್ಷೇತ್ರದ ಮಾರ್ಗದರ್ಶಕರಾಗಿ ಅದ್ಭತ ಸೇವೆ ಸಲ್ಲಿಸುತ್ತಿದ್ದಾರೆಂದು ಸೋನಿಯ ಗಾಂಧಿ ಅಭಿನಂದಿಸಿದರು. ಸಮಾಜ ಮುಖಿಯಾದ ಅವರ ಕಾರ್ಯಗಳು ಹೀಗೆಯೆ ನಿರಂತರವಾಗಿ ಸಾಗಲಿ, ಈ ಮೂಲಕ ಅದರ ಫಲ ಸಮಾಜಕ್ಕೆ ದೊರೆಯುವಂತಾಗಲಿ ಎಂದು ಹಾರೈಸಿದರು.

sonia Kudroliಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮತ್ತು ಮಂಗಳೂರು ದಸರಾದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ಸೋನಿಯ ಗಾಂಧಿಯವರು ದೇಶಕ್ಕೆ ವಿಶಿಷ್ಟ ನಾಯಕತ್ವವನ್ನು ನೀಡಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಕುದ್ರೋಳಿ ಕ್ಷೇತ್ರಕ್ಕೆ ಸೋನಿಯಾ ಗಾಂದಿಯವರ ಆಗಮನ ಹೆಮ್ಮೆಯ ವಿಷಯವಾಗಿದೆ ಎಂದರು.

ಮಾಜಿ ಸಚಿವ ಆಸ್ಕರ್ ಫರ್ನಾoಡಿಸ್, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಂ, ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ ನಾರಾಯಣ ಸ್ವಾಮಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಳಿಯ ಅಧ್ಯಕ್ಷ ಜಯ ಸಿ. ಸುವರ್ಣ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಹಅದ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅದ್ಯಕ್ಷ ಕೆ.ಪಿನಂಜುಂಡಿ ಮೊದಲಾದವರು ಉಪಸ್ಥಿತರಿದ್ದರು.

Sonia Kudroli

Sonia Kudroli

Sonia Kudroli

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English