ಪುತ್ತೂರು : ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಬೆಳಗ್ಗೆ ರೈ ಅವರ ತಾಯಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಸರಳ ರೀತಿಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಿ ಭಾಷಣಕ್ಕೆ ಪ್ರಾಮುಖ್ಯತೆ ಇರಲಿಲ್ಲ. ವಸ್ತ್ರದಾನವೇ ವಿಶೇಷವಾಗಿತ್ತು. ನೆರೆದ ಮಂದಿಗೆ ರೈ ಮತ್ತು ಅವರ ಸಂಬಂಧಿಕರು ವಸ್ತ್ರ ವಿತರಿಸಿದರು. ವಸ್ತ್ರದಾನ ಮಾಡಿ ಜನತೆಯಿಂದ ಪ್ರೀತಿಯ ಆಶೀರ್ವಾದ ಪಡೆದರು. ಈ ವಸ್ತ್ರ ವಿತರಿಸುವ ಕಾರ್ಯಕ್ರಮ ಸಂಜೆ ಏಳು ಗಂಟೆಯ ತನಕವೂ ನಡೆಯಿತು.
ಅಶೋಕ್ ಕುಮಾರ್ ರೈ ಮಾತನಾಡಿ, ದೀಪಾವಳಿಯ ಅಂಗವಾದ ಈ ಸಾಂಪ್ರದಾಯಿಕವಾಗಿ ವಸ್ತ್ರ ವಿತರಣೆಯ ಕಾರ್ಯಕ್ರಮ ಯಾವುದೇ ಹೆಸರಿಗಾಗಿ ನಡೆಸುತ್ತಿಲ್ಲ. ಇದೊಂದು ಪ್ರೀತಿ ಹಂಚುವ ಕಾರ್ಯಕ್ರಮ. ಈ ವರ್ಷ 15,000 ಮಂದಿಗೆ ಸೀರೆ ಹಾಗೂ ಪಂಚೆಯನ್ನು ವಿತರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಸುಮಾ ಅಶೋಕ್‍ಕುಮಾರ್ ರೈ, ಸೇರಿದಂತೆ ಅವರ ಮನೆಯವರು ಭಾಗಿಯಾಗಿದ್ದರು. ಕೊಡಂಬಾಡಿಯ ರೈ ನಿವಾಸದಲ್ಲಿ ಕಳೆದ ಬಾರಿಯ ದೀಪಾವಳಿಯಂದು 12,600 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು.
Click this button or press Ctrl+G to toggle between Kannada and English