ಮಂಗಳೂರು: ಮಂಗಳೂರು ಮೂಲದ ನೃತ್ಯ ತಂಡ ಓಶಿಯನ್ ಕಿಡ್ಸ್ ತಂಡವು ಕಲರ್ಸ್ ಟಿವಿ ಚಾನೆಲ್ ನಲ್ಲಿ ಪ್ರಸಾರ ವಾಗುವ ಭಾರತದ ಹೆಸರಾಂತ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋ ನ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಇಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓಶಿಯನ್ ಕಿಡ್ಸ್ ತಂಡದ ಮುಖ್ಯಸ್ಥರಾದ ಪ್ರಮೋದ್ ಆಳ್ವ ಈ ವಿಷಯವನ್ನು ತಿಳಿಸಿದರು. ಓಶಿಯನ್ ಕಿಡ್ಸ್ ತಂಡವು ಇದುವರೆಗೆ ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 1988 ರಲ್ಲಿ ಈ ತಂಡವು ಅಸ್ತಿತ್ವಕ್ಕೆ ಬಂದಿದ್ದು ಸುಮಾರು 24 ವರ್ಷಗಳಿಂದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ನೃತ್ಯ ತರಭೇತಿಯನ್ನು ನೀಡುತ್ತಿದ್ದು, 5000 ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ.
ಓಶಿಯನ್ ಕಿಡ್ಸ್ ತಂಡವು ಸೆಮಿ ಫೈನಲ್ ಹಂತದಲ್ಲಿ ರಾಮಾಯಣದಲ್ಲಿನ ಒಂದು ಪ್ರಮುಖ ಸನ್ನಿವೇಶವಾದ ಸೀತ ಅಪಹರಣ ದೃಶ್ಯವನ್ನು 3 ನಿಮಿಷ, 15 ಸೆಕೆಂಡ್ ಗಳಲ್ಲಿ ಪ್ರದರ್ಶಸಲು ಸಿದ್ಧತೆ ನಡೆಸಿದ್ದು ಇದರಲ್ಲಿ ಒಟ್ಟು 33 ಓಶಿಯನ್ ಕಿಡ್ಸ್ ತಂಡದ ನೃತ್ಯಗಾರರಿರುವುದಾಗಿ ತಿಳಿಸಿದರು. ಬಾನುವಾರ ರಾತ್ರಿ 10.00 ಗಂಟೆಗೆ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವುದಾಗಿ ತಿಳಿಸಿದರು.
ಈ ರಿಯಾಲಿಟಿ ಶೋ ನ ಆಯ್ಕೆಸುತ್ತಿನಲ್ಲಿ ದೇಶಾದ್ಯಂತ ಒಟ್ಟು 30,000 ತಂಡಗಳು ಭಾಗವಹಿಸಿದ್ದು ಅದರಲ್ಲಿ 3,000 ತಂಡಗಳನ್ನು ಮೆಗಾ ಆಡಿಷನ್ ಗೆ ಆರಿಸಲಾಗಿದ್ದು, ಅವುಗಳಲ್ಲಿ 37 ತಂಡಗಳನ್ನು ಉಪಾಂತ್ಯಕ್ಕೆ ಆರಿಸಲಾಗಿದೆ. ಇವುಗಳಲ್ಲಿ ತಮ್ಮ ತಂಡವು ಕರ್ನಾಟದಿಂದ ಆಯ್ಕೆಯಾದ ಏಕೈಕ ತಂಡವಾಗಿದೆ ಎಂದರು.
ತಮ್ಮ ತಂಡವು ಅಂತಿಮ ಸುತ್ತಿನಲ್ಲಿ ಗೆಲ್ಲುವ ವಿಶ್ವಾಸವಿದ್ದು ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ OCE ಎಂದು 56882 ಕ್ಕೆ ಎಸ್.ಎಮ್.ಎಸ್ ಮಾಡುವುದರ ಮೂಲಕ ಮತಚಲಾಯಿಸಬೇಕೆಂದರು.
Click this button or press Ctrl+G to toggle between Kannada and English