ಕನ್ನಡ ರಾಜ್ಯೋತ್ಸವದ ದಿನ ಬೆಳ್ತಂಗಡಿಯ ಕೆಲವೆಡೆ ತುಳುನಾಡಿನ ಧ್ವಜ ಹಾರಾಟ

9:27 PM, Friday, November 1st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Tulu flag ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಎರಡು ಕಡೆ ಪ್ರತ್ಯೇಕ ಧ್ವಜ ಕಾಣಿಸಿಕೊಂಡಿದೆ. ಇದು ತುಳುನಾಡಿನ ಧ್ವಜವೆಂದು ಎಂದು ಹೇಳಲಾಗಿದೆ. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಗೇಟಿನ ಮೇಲೂ ಇದೇ ಧ್ವಜ ಹಾರಾಡುತ್ತಿತ್ತು. ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಧ್ವಜಸ್ತಂಭದಲ್ಲಿದ್ದ ಕನ್ನಡ ಧ್ಜವನ್ನು ಕೆಳಗಿಳಿಸಿ ಈ ‘ತುಳು’ ಬೆಂಬಲಿತ ಧ್ವಜವನ್ನು ಹಾಕಲಾಗಿದೆ. ಈ ಕೃತ್ಯದ ವಿರುದ್ಧ ಸರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಪ್ರತ್ಯೇಕ ಧ್ವಜ ಹಾರಾಟ ಕೃತ್ಯವು ಕಳೆದ ರಾತ್ರಿ ನಡೆದಿದೆ. ಇದೀಗ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು ಪ್ರತ್ಯೇಕ ಧ್ವಜವನ್ನು ಇಳಿಸಿ ಮತ್ತೆ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.

ಇದು ತುಳು ರಾಜ್ಯದ ಹೋರಾಟಗಾರರು ಹಾರಿಸಿದ ಧ್ವಜ ಎನ್ನಲಾಗಿದೆ.  ತುಳುವರಿಗಾಗಿ ಪ್ತತ್ಯೇಕ ರಾಜ್ಯದ ಕೂಗು ಇನ್ನು ಜೀವಂತವಾಗಿದೆ. ಆದರೆ ಇತರೆಡೆಗಳಲ್ಲಿ ತುಳುವರು ತುಳು ರಾಜ್ಯಕ್ಕಾಗಿ ಮೌನವಾಗಿಯೇ ಹೋರಾಟ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English