ಚರಂಡಿ, ರಸ್ತೆ ಇಲ್ಲದ ಮಂಗಳೂರು ನಗರ : ಬಿ. ಕೆ. ಇಮ್ತಿಯಾಜ್

10:07 AM, Saturday, November 2nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

B.K-Ismailಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ – 2019ರ ಅಂಗವಾಗಿ 25ನೇ ದೇರೆಬೈಲ್ ಪಶ್ಚಿಮ ವಾರ್ಡಿನ ಚುನಾವಣಾ ಸಭೆಯನ್ನು ಸುಂಕದಕಟ್ಟೆ ಉರ್ವಸ್ಟೋರ್‌ನಲ್ಲಿ ತಾ. 01-11-2019ರಂದು ಸಂಜೆ 6ಕ್ಕೆ ಜರುಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್‌ರವರು ನೆರವೇರಿಸಿದರು. ಮುಂದುವರಿದು ಮಾತನಾಡುತ್ತಾ, ಮಂಗಳೂರನ್ನು ಶಿಕ್ಷಣದ ರಾಜಧಾನಿ, ವಾಣಿಜ್ಯದ ರಾಜಧಾನಿ ಎಂದು ಹೇಳುತ್ತಾರೆ. ಆದರೆ ಮಂಗಳೂರು ನಗರ ಜಗತ್ ವಿಖ್ಯಾತ ಆಗುವ ಬದಲು ಜಗತ್ ಕುಖ್ಯಾತವಾಗಿ ಮುಂದುವರಿಯುತ್ತಿದೆ. ಉದ್ಯೋಗ ನೀಡಲು, ಶಿಕ್ಷಣ ನೀಡಲು, ನಗರಾಭಿವೃದ್ಧಿ ಮಾಡಬೇಕಾದ ಮಂಗಳೂರು ನಗರ ಇದ್ಯಾವುದನ್ನೂ ಮಾಡುತ್ತಿಲ್ಲ. ಇದರ ಬದಲು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹೆಚ್ಚಿಸಿ ಜನರ ಪ್ರಾಣ ತೆಗೆಯುವಂತೆ ಮಂಗಳೂರು ನಗರ ಬೆಳೆಯುತ್ತಿದೆ. ಮಂಗಳೂರು ನಗರ ಎಂದರೆ ಚರಂಡಿಯಿಲ್ಲದೆ, ರಸ್ತೆಯಿಲ್ಲದೆ, ರೋಗಗಳನ್ನು ಹುಟ್ಟಿಸುವ ನಗರವಾಗಿದೆ. ಮೂಲಭೂತ ಸಮಸ್ಯೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಹೇಳಿದರು.

ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಸುನಂದ ಕೆ. ಮಾತನಾಡುತ್ತಾ, ನಳ್ಳಿ ನೀರು, ಬೀದಿದೀಪ ಮುಂತಾದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕಾದ ಮಂಗಳೂರು ನಗರ ಯಾವುದೂ ಮಾಡಲಿಲ್ಲ. ನೀರಿನ ಬಿಲ್ ದರ ಹೆಚ್ಚಿಸಿ ಜನರನ್ನು ಬಲಿಪಶು ಮಾಡುತ್ತಿದೆ. ನಗರದಲ್ಲಿ ತ್ಯಾಜ್ಯಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ. ಒಳಚರಂಡಿ ಸಮಸ್ಯೆ ಇನ್ನೂ ಕೂಡ ಬಗೆಹರಿಸಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿಲ್ಲ. ಡೆಂಗ್ಯೂ ರೋಗಕ್ಕೆ ಅಧಿಕ ಮಂದಿ ಬಲಿಯಾಗಿದ್ದಾರೆ. ಅದಕ್ಕೆ ಸರಿಯಾದ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಹಾನಗರ ಪಾಲಿಕೆಯಲ್ಲಿ ಮಾಡಲಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಸಿಪಿಐ(ಎಂ) ಮುಖಂಡರಾದ ಅಶೋಕ್ ಶ್ರೀಯಾನ್, ನಾಗೇಂದ್ರ, ರಘುವೀರ, ಮನೋಜ್ ಕುಲಾಲ್, ದಿನೇಶ್ ಶ್ರೀಯಾನ್, ಧನರಾಜ್, ಸರೋಜ ಉರ್ವಸ್ಟೋರ್, ದುಗ್ಗಪ್ಪ, ಗಂಗಾಧರ್, ನಾರಾಯಣ ಪೂಜಾರಿ, ಇಕ್ಬಾಲ್, ಪ್ರಶಾಂತ್ ಎಂ.ಬಿ. ಉಪಸ್ಥಿತರಿದ್ದರು.

ಪ್ರಶಾಂತ್ ಎಂ. ಬಿ. ಮೊದಲಿಗೆ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ನೀಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English