ಅಕ್ರಮ ಕಡವೆ ಬೇಟೆ : ಆರೋಪಿ ಬಂಧನ

3:42 PM, Saturday, November 2nd, 2019
Share
1 Star2 Stars3 Stars4 Stars5 Stars
(No Ratings Yet)
Loading...

Kadaveಕೊಡಗು : ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣ ವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕರಿಕೆ ಗ್ರಾಮದ ಎಳ್ಳು ಕೊಚ್ಚಿ ಮಡೆ ಕಾನ ನಿವಾಸಿ ರಾಘವ ತಂದೆ ಎಲಂಬಾ ಮತ್ತು ಇತರರು ಸೇರಿ ದಿನಾಂಕ 31ಅಕ್ಟೋಬರ್ ರಂದು ಕಡವೆ ಮರಿವೊಂದನ್ನು ಬೇಟೆ ಮಾಡಿ ಮಾಂಸವಾಗಿ ಪರಿವತಿ೯ಸಿ ಕೇರಳ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಬಗ್ಗೆ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಕರಿಕೆ ಅರಣ್ಯ ಸಿಬ್ಬಂದಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅರಣ್ಯ ಮೊಕ್ಕದಮ್ಮೆ ದಾಖಲು ಮಾಡಿ, ಬೇಟೆ ಯಾಡಿದ ಕಡವೆ ತಲೆ, ಚರ್ಮ ಮತ್ತು ಕಾಲುಗಳು ಕೃತ್ಯಕ್ಕೆ ಬಳಸಲಾದ ಕೇಬಲ್ ವೈರ್, ಕತ್ತಿ ಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Kadaveಆರೋಪಿಯು ನುರಿತ ಬೇಟೆಗಾರನಾಗಿದ್ದು ಬೇಟೆಯಾಡಿ ಕೇರಳದ ವ್ಯಕ್ತಿಗಳಿಗೆ ಮಾರಾಟ ಮಾಡುವುದೇ ಈತನ ಉದ್ಯೋಗವಾಗಿದ್ದು ಇದೀಗ ಇಲಾಖೆ  ಸಿಬ್ಬಂದಿಗಳ ಪರಿಶ್ರಮದಿಂದ ಇತನನ್ನು ಖೆಡ್ಡಾಕ್ಕೆ ಕೆಡವಿದ್ದು, ಕೇರಳಮೂಲದದ ವ್ಯಕ್ತಿಯ ಪತ್ತೆ ಗೆ ಇಲಾಖೆ ಕ್ರಮ ವಹಿಸಿದ್ದು ಅರಣ್ಯ ಇಲಾಖೆಯ ಈ ಕಾರ್ಯ ವೈಖರಿಯನ್ನು ಗ್ರಾಮಸ್ಥರು ಶ್ಲಾಗಿಸಿರುತ್ತಾರೆ.

ವಲಯ ಅರಣ್ಯ ಧಿಕಾರಿ ದೇವರಾಜು ಹೆಚ್.ಜಿ.ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅರಣ್ಯ ರಕ್ಷಕರಾದ ಸದಾನಂದ, ಉತ್ತಯ್ಯ,ಸಚೀನ್,ವೀಕ್ಷಕರಾದ ಪ್ರವೀಣ,ಚಂದ್ರಶೇಖರ ಮತ್ತು ಭಾಗಮಂಡಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English