ಮಾಜಿ ಸಚಿವ ಎಂ.ಸಿ.ನಾಣಯ್ಯ ಮನೆಯಲ್ಲಿ ನಾಗರಹಾವು

1:54 PM, Sunday, November 3rd, 2019
Share
1 Star2 Stars3 Stars4 Stars5 Stars
(No Ratings Yet)
Loading...

pious pirera  ಮಡಿಕೇರಿ : ಹಾಕತ್ತೂರಿನಲ್ಲಿರುವ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ತೋಟದ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾದ ನಾಗರಹಾವನ್ನು ಹಾಕತ್ತೂರಿನ ಗ್ರಾ.ಪಂ ಸದಸ್ಯ, ಉರಗ ರಕ್ಷಕ ಸ್ನೇಕ್ ಪಿಯೂಷ್ ಪೆರೇರಾ ಅವರು ಸೆರೆ ಹಿಡಿದು ರಕ್ಷಿಸಿದ್ದಾರೆ.

ಮತ್ತೊಂದೆಡೆ ಮೇಕೇರಿಯ ರಾಧಾ ಎಂಬುವವರ ಮನೆಯಲ್ಲಿ ಪತ್ತೆಯಾದ ಚೆಟ್ಟಮಂಡಲ ಹಾವನ್ನು ಕೂಡ ಪೆರೇರಾ ಸೆರೆ ಹಿಡಿದಿದ್ದಾರೆ. ಎರಡೂ ಹಾವುಗಳನ್ನು ಅವರು ಸಂಪಾಜೆಯ ಅರಣ್ಯ ಭಾಗಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಪಿಯೂಷ್ ಪೆರೇರಾ ಅವರು ಇಲ್ಲಿಯವರೆಗೆ 72 ನಾಗರಹಾವು ಹಾಗೂ 38 ವಿವಿಧ ಜಾತಿಯ ಹಾವುಗಳು ಸೇರಿದಂತೆ ಒಟ್ಟು 110  ಹಾವುಗಳನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಎಲ್ಲೇ ಕಂಡು ಬಂದರೂ ಅದರ ಜೀವಕ್ಕೆ ಹಾನಿ ಮಾಡದೆ ತಮ್ಮ ಮೊ.ಸಂ : 94819 52253  ನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English