ಮಡಿಕೇರಿ : ಪೊನ್ನಂಪೇಟೆ (ಕೊಡಗು ) ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ಪಿ ವಿವೇಕ್ ಎಂಬಾತನ ಅನಧಿಕೃತ ಹೋಂ ಸ್ಟೇ ಒಂದರಲ್ಲಿ ರೇವಾಪಾರ್ಟಿ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಕೊಡಗು ಜಿಲ್ಲಾ ಅಪರಾಧಿ ಪತ್ತೆದಳದ ಅಧಕಾರಿ ಮಹೇಶ್ ರವರ ನೇತೃತ್ವದ ತಂಡ ಶನಿವಾರ ರಾತ್ರಿ ಧಾಳಿ ನಡೆಸಿ ೮ ಮಂದಿಯನು ಬಂಧಿಸಿದೆ. ದಾಳಿ ಸಂಧರ್ಭ ಹೈದರಬಾದ್ ಮೂಲದ ಸುಮಾರು 100 ಕ್ಕೂ ಏಚ್ಚು ವಿದ್ಯಾರ್ಥಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಸ್ಥ ಯುವಕ-ಯುವತಿಯರು ಮದ್ಯ, ಹೆಂಡ, ಗಾಂಜಾ ಮುಂತಾದ ಮಾದಕ ದ್ರವ್ಯಗಳನ್ನು ಸೇವಿಸುತ್ತಾ ಡಿ.ಜೆ ಧ್ವನಿವರ್ಧಕದೊಂದಿಗೆ ಮೈ ಮರೆತು ಕುಣಿಯುತ್ತಿರುವುದು ಕಂಡು ಬಂದಿದೆ.
ಹೋಂ ಸ್ಟೇ ಅನಧಿಕೃತವಾಗಿರುವ ವಿಷಯವು ಈ ಸಂಧರ್ಭ ಬೆಳಕಿಗೆ ಬಂದಿರುತ್ತದೆ. ಘಟನೆ ನಡೆದ ಸ್ಥಳದಲ್ಲಿ ನೂತನ ರೆಸಾರ್ಟ್ ನಿರ್ಮಾಣ ಕಾರ್ಯವಾಗುತ್ತಿರುವ ಕುರಿತು ಪೋಲಿಸ್ ಅಧಿಕಾರಿಗಳು ಮಾಹಿತಿ ಕಲೆಹಾಕಿರುತ್ತಾರೆ.
ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ತಂಡದ ಮ್ಯಾನೇಜರ್, ಹೋಂ ಸ್ಟೇ ಮಾಲಿಕ ವಿವೇಕ್, ಡಿಜೆ ಆಪರೇಟರ್ ಗಳು, ಅತಿಯಾಗಿ ಮಾದಕ ದ್ರವ್ಯ ಸೇವಿಸಿ ಅಮಲಿನಲ್ಲಿದ್ದ ಮೂವರು ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳದಿಂದ 82,000.00 ರೂ ನಗದು ಹಾಗೂ ಡಿ.ಜೆಗೆ ಉಪಯೋಗಿಸಿದ ಸೌಂಡ್ ಸಿಸ್ಟಮ್ ಗಳನ್ನು, ಮಾದಕ ದ್ರವ್ಯ, ಗಾಂಜಾ, ಮದ್ಯಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ .ಪೊನ್ನಂಪೇಟೆ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಕಲಾಗಿದ್ದು ತನಿಖೆ ಮುಂದುವರೆದಿದೆ.
Click this button or press Ctrl+G to toggle between Kannada and English