ಮಂಗಳೂರು : ಮಂಗಳೂರು ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಮಿಷನರ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡು ಕೊಡ್ಲಮೊಗರು ನಿವಾಸಿ ಅಬೂಬಕರ್ ಸಮದ್ (24), ಕಾಸರಗೋಡು ಕಡಂಬಾರು ನಿವಾಸಿಗಳಾದ ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22) ಹಾಗೂ ಮುಹಮ್ಮದ್ ಅರ್ಷದ್ (18) ಬಂಧಿತ ಆರೋಪಿಗಳು. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ಬಂಧಿತ ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 2.5 ಲಕ್ಷ ಮೌಲ್ಯದ ಹುಂಡೈ ಕಾರು, 50 ಸಾವಿರ ರೂ. ಮೌಲ್ಯದ ಸ್ಕೂಟರ್, ಮೂರು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದವರು ತಿಳಿಸಿದರು.
ಆರೋಪಿಗಳ ಅಪರಾಧದ ಹಿನ್ನೆಲೆಯ ತನಿಖೆ ನಡೆಯುತ್ತಿದೆ. ಈ ಬಗ್ಗೆ ಮುಂಬೈ ಪೊಲೀಸರಿಗೂ ಮಾಹಿತಿ ಒದಗಿಸಲಿದ್ದೇವೆ ಎಂದರು.
ಮಾದಕ ಕೃತ್ಯದಲ್ಲಿ ಎಂತಹ ಪ್ರತಿಷ್ಠಿತ ವ್ಯಕ್ತಿಯೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬಸ್ ಚಾಲಕರು ಯಾರೋ ಕೊಟ್ಟ ಕವರ್‌ಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಮಾದಕ ದ್ರವ್ಯಗಳ ಸಾಗಾಟ ನಡೆಯುತ್ತಿರುವ ಘಟನೆಗಳೂ ನಡೆಯುತ್ತಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದರು.
Click this button or press Ctrl+G to toggle between Kannada and English