ಮಂಗಳೂರು : ಕಂಟೈನರ್ ಜಾರಿ ಕ್ಯಾಬೀನ್ ಮೇಲೆ ಬಿದ್ದು ಚಾಲಕ ಸ್ಥಳದಲ್ಲೇ ಮೃತ್ಯು

11:00 AM, Thursday, November 7th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Vinod-Poojary

ಮಂಗಳೂರು : ಮಂಗಳೂರು ನಗರದ ಹೊರವಲಯದಲ್ಲಿನ ಎನ್‌ಎಂಪಿಟಿ ಹಾರ್ಬರ್‌ನಲ್ಲಿ ಶಿಪ್‌ವೊಂದಕ್ಕೆ ರಫ್ತು ಮಾಡುತ್ತಿದ್ದ ಕಂಟೈನರ್ ಪಲ್ಟಿಯಾಗಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ವಾಮಂಜೂರು ನಿವಾಸಿ ವಿನೋದ್ ಪೂಜಾರಿ (50)ಮೃತರು ಎಂದು ಗುರುತಿಸಲಾಗಿದೆ.

ಬುಧವಾರ ತಡರಾತ್ರಿ ಶಿಪ್‌ವೊಂದಕ್ಕೆ ರಫ್ತು ಮಾಡಲು ಕಂಟೈನರ್‌ನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಟರ್ನಿಂಗ್‌ನಲ್ಲಿ ಕಂಟೈನರ್ ಗಾಡಿಯಿಂದ ಜಾರಿ ಲಾರಿ ಕ್ಯಾಬೀನ್ ಮೇಲೆ ಬಿದ್ದಿದೆ. ಪರಿಣಾಮ ವಿನೋದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಡಿಯ ಟ್ರೇಲರ್‌ಗಳಿಗೆ ಸೆಫ್ಟೀ ಲಾಕ್ ಹಾಕಿದ್ದರೆ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಸೆಫ್ಟಿ ಲಾಕರ್ ಹಾಕಲು ಕನಿಷ್ಠ 10-15 ನಿಮಿಷ ಬೇಕಾಗುತ್ತದೆ. ಶಿಪ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಸಮಯ ಲಾಕರ್ ಹಾಕಿದರೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English