ನವದೆಹಲಿ : ಟೀಮ್ ಇಂಡಿಯಾದ ಮಹಿಳಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಅತಿ ವೇಗವಾಗಿ 2000 ರನ್ ದಾಖಲಿಸಿದ ಎರಡನೇ ಭಾರತೀಯಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಸ್ಮೃತಿ ಹಿಂದಿಕ್ಕಿದ್ದಾರೆ.
ಎಡಗೈ ಬ್ಯಾಟ್ಸ್ವುಮೆನ್ ಆಗಿರುವ ಸ್ಮೃತಿ, ಬುಧವಾರ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದೇ ಪಂದ್ಯವನ್ನು ಭಾರತ 6 ವಿಕೆಟ್ಗಳಿಂದ ಅಮೋಘ ಜಯ ಸಾಧಿಸಿತು.
ಉತ್ತಮ ಪ್ರದರ್ಶನ ತೋರಿದ ಸ್ಮೃತಿ ಮಂಧಾನ 74 ರನ್ ಬಾರಿಸುವ ಮೂಲಕ ವಿಶೇಷ ಸಾಧನೆಗೈದರು. ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್ ಜತೆ 141 ರನ್ ಆರಂಭಿಕ ಜತೆಯಾಟ ಪ್ರದರ್ಶನ ನೀಡುವ ಮೂಲಕ ವೆಸ್ಟ್ ಇಂಡೀಸ್ ನೀಡಿದ 195 ರನ್ ಅನ್ನು ಸುಲಭವಾಗಿ ಬೆನ್ನತ್ತುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಭಾರತ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಅರ್ಧಶತಕದ ನಗೆಬೀರುವ ಮೂಲಕ 23 ವರ್ಷ ವಯಸ್ಸಿನ ಸ್ಮೃತಿ, ಏಕದಿನ ಮಾದರಿ ಪಂದ್ಯದಲ್ಲಿ 2000 ಸಾವಿರ ಗಡಿ ಮುಟ್ಟಲು 51 ಇನ್ನಿಂಗ್ಸ್ಗಳನ್ನು ತೆಗದುಕೊಂಡರು. ಈ ಮೂಲಕ ವೇಗವಾಗಿ 2000 ರನ್ ಗಳಿಸಿದ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯರಾದ ಬೆಲಿಂಡಾ ಕ್ಲಾರ್ಕ್(41 ಇನ್ನಿಂಗ್ಸ್) ಮತ್ತು ಮೆಗ್ ಲ್ಯಾನ್ನಿಂಗ್(45 ಇನ್ನಿಂಗ್ಸ್) ನಂತರ ಮೂರನೇ ಸ್ಥಾನವನ್ನು ಕಾಯ್ದುಕೊಂಡರು. ಸದ್ಯ 51 ಪಂದ್ಯದಿಂದ 43.08 ರನ್ ಸರಾಸರಿಯಲ್ಲಿ 2025ರನ್ ಕಲೆಹಾಕಿರುವ ಸ್ಮೃತಿ, 4 ಶತಕ ಹಾಗೂ 17 ಅರ್ಧಶತಕಗಳನ್ನು ತಮ್ಮ ಬತ್ತಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.
ಸದ್ಯ ಏಕದಿನ ಕ್ರಿಕೆಟ್ನಲ್ಲಿ ಪುರುಷರ ತಂಡದಲ್ಲಿ ಶಿಖರ್ ಧವನ್ ಮಾತ್ರ ಈ ದಾಖಲೆಯನ್ನು ಬರೆದಿದ್ದಾರೆ. ಕೇವಲ 48 ಇನ್ನಿಂಗ್ಸ್ನಲ್ಲಿ ಧವನ್ 2000 ರನ್ ಗುರಿ ಮುಟ್ಟಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲ ಇದ್ದಾರೆ. 2000 ರನ್ ಗುರಿ ಮುಟ್ಟಲು ಆಮ್ಲ ತೆಗೆದುಕೊಂಡ ಇನ್ನಿಂಗ್ಸ್ ಕೇವಲ 40
Click this button or press Ctrl+G to toggle between Kannada and English