ಅಯೋಧ್ಯೆ ತೀರ್ಪು : ಪ್ರಕಟಣೆಗೂ ಮುನ್ನ ಪೊಲೀಸರು ಅಲರ್ಟ್

10:52 AM, Friday, November 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

mangaluru-alert

ಮಂಗಳೂರು : ಅಯೋಧ್ಯೆ ತೀರ್ಪು ಯಾರ ಪರ ಬಂದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಹಿಂದೂ-ಮುಸ್ಲಿಂ ಮುಖಂಡರು ಪೊಲೀಸ್ ಇಲಾಖೆಗೆ ಮಾತು ಕೊಟ್ಟಿದ್ದಾರೆ.

ಕೆಲ ದಿನಗಳಲ್ಲೇ ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದು ಶಾಂತಿ ಕದಡುವ ಪರಿಸ್ಥಿತಿ ಬರಬಾರದೆಂದು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕರೆದಿದ್ದ ಶಾಂತಿ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರುಗಳು, ಸಾಮಾಜಿಕ ಕಾರ್ಯಕರ್ತರು, ಸಮಾಜದ ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಅವರು ತೀರ್ಪು ಏನೇ ಬಂದರೂ ಅದನ್ನು ಸಂಘ ಪರಿವಾರ ಸ್ವಾಗತಿಸಲಿದೆ. ಈಗಾಗಲೇ ಕಾರ್ಯಕರ್ತರಿಗೆ ಯಾವುದೇ ವಿಜಯೋತ್ಸವ, ಪಟಾಕಿ ಸಿಡಿಸುವುದು, ಸಾಮಾಜಿಕ ಜಾಲತಾಣ ದುರುಪಯೋಗಿಸದಂತೆ ಸೂಚನೆ ನೀಡಲಾಗಿದೆ. ತೀರ್ಪಿನ ಬಗ್ಗೆ ಯಾವುದೇ ಪತ್ರಿಕಾಗೋಷ್ಟಿ, ಪತ್ರಿಕಾ ಹೇಳಿಕೆ ನೀಡದಂತೆಯೂ ಸೂಚಿಸಲಾಗಿದೆ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡ ಕೆ ಎಂ ಮಸೂದ್ ಮಾತನಾಡಿ, ಅಯೋಧ್ಯೆ ತೀರ್ಪು ಏನೇ ಬಂದರೂ ಸ್ವಾಗತಿಸುತ್ತೇವೆ. ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ, ಅಭಿಪ್ರಾಯಗಳು, ಪೊಲೀಸರ ಮತ್ತು ರಾಜಕಾರಣಿಗಳ ವರ್ತನೆಯ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾದವು. ಇನ್ನು, ಸಭೆಯ ಅಧ್ಯಕ್ಷತೆಯನ್ನು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವಹಿಸಿದ್ದರು. ಈ ವೇಳೆ ಶಾಸಕ ಯು.ಟಿ. ಖಾದರ್, ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ.ಎಸ್. ಹರ್ಷ, ದ.ಕ. ಜಿಲ್ಲಾ ಎಸ್.ಪಿ ಲಕ್ಷ್ಮೀಪ್ರಸಾದ್ ಮೊದಲಾದವರು ಭಾಗಿಯಾಗಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English