ದ.ಕ.ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅವರಣದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ

11:36 PM, Sunday, October 21st, 2012
Share
1 Star2 Stars3 Stars4 Stars5 Stars
(5 rating, 4 votes)
Loading...

Police Martyrs’ Dayಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ.ಜಿಲ್ಲಾ ಪೊಲೀಸರ ಸಹಯೋಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದ.ಕ.ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಛೇರಿ ಅವರಣದಲ್ಲಿ ಇಂದು ಬೆಳಗ್ಗೆ ಆಚರಿಸಲಾಯಿತು.

ಹುತಾತ್ಮ ಪೊಲೀಸರಿಗೆ ಸ್ಮಾರಕದ ಬಳಿ ಹೂ ಗುಚ್ಚ ಇಟ್ಟು, ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ದ.ಕ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ನಿಜಗಣ್ಣನವರ್, 1959 ರ ಅ.21 ರಂದು ಎಸ್ಪಿ ಚರಣ್ ಸಿಂಗ್ ನೇತೃತ್ವದ ಸಿ.ಆರ್.ಪಿ.ಎಫ್ ತುಕಡಿ ಭಾರತ ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ಚೀನಾ ಸೈನಿಕರು ದಾಳಿ ನಡೆಸಿದಾಗ ತಮ್ಮಲ್ಲಿರುವ ಅತೀ ಕಡಿಮೆ ಆಯುಧದಲ್ಲಿ ಜೀವದ ಹಂಗನ್ನು ತೊರೆದು ಶತ್ರುವಿನೊಂದಿಗೆ ಹೋರಾಡಿ 10 ಜನರು ಹುತಾತ್ಮರಾದರೆ 9 ಜನರು ಶತ್ರುಗಳಿಗೆ ಸೆರೆಯಾದರು. ಪೊಲೀಸರ ಈ ದೀರ ಹೋರಾಟದ ದಿನವಾದ ಅಕ್ಟೋಬರ್ 21 ನ್ನು ಅಂದಿನಿಂದ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

Police Martyrs’ Dayದೀರ ಪೊಲೀಸರು ಸಮಾಜದ ಸುರಕ್ಷತೆಗೋಸ್ಕರ ತಮ್ಮ ಪ್ರಾಣವನ್ನು ಕೊಟ್ಟು ಹುತಾತ್ಮರಾಗಿದ್ದಾರೆ. ಈಗೀನ ದಿನಗಳಲ್ಲಿ ಪೊಲೀಸರನ್ನು ಹೀಗೆಳೆಯುವ ಕೆಲಸ ನಡೆಯುತ್ತಿದೆ. ನಾವು ಒಳ್ಳೆಯ ಕೆಲಸ ಮಾಡುವವರನ್ನು ಪ್ರಶಂಸಿಸುವ ಬದಲು ಸಮಾಜಘಾತುಕ ಶಕ್ತಿಗಳ ಬಗ್ಗೆ ಹೆಚ್ಚು ಲಕ್ಷ ಕೊಡುತ್ತಿದ್ದೇವೆ ಇದು ಒಳ್ಳೆಯ ಲಕ್ಷಣವಲ್ಲ. ಪೊಲೀಸರು ಸಮಾಜದ ಹಿತಕ್ಕೋಸ್ಕರ ತಮ್ಮ ವೈಯಕ್ತಿಕ ಬದುಕನ್ನು ಪಣಕ್ಕಿಡುತ್ತಾರೆ. ಅವರನ್ನು ನಾವೆಲ್ಲಾ ಗೌರವಿಸಬೇಕು ಎಂದರು.

ದೇಶದಲ್ಲಿ 112 ಕೋಟಿ ಜನರ ನಿಯಂತ್ರಣಕ್ಕೆ ಬೇಕಾಗುವ ಪೊಲೀಸ್ ವ್ಯವಸ್ಥೆ ನಮ್ಮಲ್ಲಿಲ್ಲ. ಸಮಾಜದ ಶಾಂತಿ ಭಂಗವಾದಾಗ ಅದನ್ನು ನಿಯಂತ್ರಿಸಲು ಬರುವ ಪೊಲೀಸರನ್ನು ದೂಷಿಸುತ್ತೇವೆ. ಇದರ ಬದಲು ನಾವೂ ಅವರೊಂದಿಗೆ ಅವರ ಕೆಲಸ ಕಾರ್ಯಗಳಲ್ಲಿ ಜತೆಗೂಡಿ ಅವರಿಗೆ ಸಹಾಯ ಮಾಡೋಣ ಎಂದರು.

Police Martyrs’ Dayಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪಶ್ಚಿಮವಲಯ ಐ.ಜಿ.ಪಿ ಪ್ರತಾಪ್ ರೆಡ್ಡಿ ಮಾತನಾಡಿ, ಈಗಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಕೆಲಸ ಜಟಿಲವಾಗುತ್ತಿದೆ. ಪೊಲೀಸ್ ಇಲಾಖೆ ಸಮಾಜದಲ್ಲಿ ನಡೆಯುವ ಎಲ್ಲಾ ಘಟನೆಗಳತ್ತ ಗಮನ ಹರಿಸಿ ಸಮಾಜದಲ್ಲಿರುವ ಕೆಲವು ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡಾಗ ಅವರ ಪರವಾದ ವ್ಯಕ್ತಿಗಳು ಇಲಾಖೆಯನ್ನು ದೂಷಿಸುವುದು ನಿಲ್ಲಬೇಕು ಎಂದರು. ಸಾರ್ವಜನಿಕರೆಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಹಾಗೂ ದ.ಕ ಜಿಲ್ಲಾ ಎಸ್.ಪಿ ಅಭಿಷೇಕ್ ಗೋಯಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Police Martyrs’ Day

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English