ನ.14 ರಂದು ಕಾಂಗ್ರೆಸಿಗರು ಕಣ್ಣೀರು ಸುರಿಸಲಿದೆ : ಬಿ ಜನಾರ್ದನ ಪೂಜಾರಿ

4:04 PM, Friday, November 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Janardhana-Poojary

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ. ಫಲಿತಾಂಶ ಪ್ರಕಟಣೆಯ ದಿನ ಅಂದರೆ ನ. 14 ರಂದು ಕಾಂಗ್ರೆಸ್ ನಾಯಕರು ಕಣ್ಣೀರು ಸುರಿಸಲಿದೆ, ಎಂದು ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ.

ನ.8ರ ಶುಕ್ರವಾರದಂದು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜನಾರ್ದನ ಪೂಜಾರಿಯವರು ತಿಳಿಸಿದ್ದಾರೆ.

ಅಯೋಧ್ಯೆ ತೀರ್ಪು ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಅಯೋಧ್ಯೆ ತೀರ್ಪು ಹೊರಬೀಳುವಾಗ ಪ್ರತಿಯೊಬ್ಬರು ಶಾಂತಿ ಸಾಮರಸ್ಯ ಕಾಪಾಡಬೇಕು. ನ್ಯಾಯಾಂಗದ ತೀರ್ಪಿಗೆಗೆ ಎಲ್ಲರೂ ಗೌರವ ಕೊಡಬೇಕು. ಈ ವಿಚಾರವಾಗಿ ಎಲ್ಲರೂ ಸಹಕರಿಸಬೇಕು ಎಂದರು.

ಇನ್ನು ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು , “ನ್ಯಾಯಾಲಯ ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಕಪಟ ತಂತ್ರ ಪುನರ್ ವರ್ತನೆಯಾಗದಂತೆ ನೋಡಿಕೊಳ್ಳಬೇಕು. ಚುನಾವಣೆಯಲ್ಲಿ ಜನಾಭಿಪ್ರಾಯ ಮೂಲಕ ಅಧಿಕಾರ ನಡೆಸಿದ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕೀಯಕ್ಕೆ ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ” ಎಂದು ಹೇಳಿದರು.

ಸಿದ್ಧರಾಮಯ್ಯ ಆಡಳಿತ ಕಾಲದಲ್ಲಿ ಮಂಗಳೂರಿಗೆ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,”ಇದು ಸುಳ್ಳು ಎಂದು ಸಿದ್ದರಾಮಯ್ಯ ಸತ್ಯ ಮಾತನಾಡಿದ್ದಾರೆಯೇ?” ಆರೋಪಿಸಿದರು.

ಮದ್ಯದಂಗಡಿಗಳಿಗಿರುವ ದೇವರ ಹೆಸರನ್ನು ತೆಗೆದುಹಾಕುವ ಪ್ರಸ್ತಾಪದ ಬಗ್ಗೆ ಕೇಳಿದಾಗ, ಬಿ ಜನಾರ್ಧನ ಪೂಜಾರಿ, “ಮದ್ಯದಂಗಡಿಗಾಗಿ ದೇವರ ಹೆಸರನ್ನು ತೆಗೆದುಹಾಕುವ ಪ್ರಸ್ತಾಪದ ಸರಿಯಾದ ನಿರ್ಧಾರವಾಗಿದೆ” ಎಂದರು.

ಕಾಂಗ್ರೆಸ್ ಮುಖಂಡರಾದ ಕಲ್ಲಿಗೆ ತಾರನಾಥ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English