ದುದ್ದಗಹಳ್ಳಿ ಪೇಪರ್ ಮಿಲ್ ಬಳಿ ಭೀಕರ ಅಪಘಾತ : ಮೂವರು ಸಾವು, ಇಬ್ಬರು ಗಂಭೀರ

5:20 PM, Friday, November 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

mysuru

ಮೈಸೂರು : ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಬೆಂಗಳೂರು ನಿವಾಸಿಗಳಾದ ಮೋಹನ ಮತ್ತು ಉಮ ಎಂದು ಗುರುತಿಸಲಾಗಿದ್ದು ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಇವರ KA-01 MC-3629 ನಂಬರ್ನ ಕಾರ್ನಲ್ಲಿ ಗೃಹಪ್ರವೇಶಕ್ಕೆಂದು ದುದ್ದಗಹಳ್ಳಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿಂದ ವಾಪಸ್ ತೆರಳುವಾಗ ಟಿ.ನರಸೀಪುರ ತಾಲೂಕಿನ ದುದ್ದಗಹಳ್ಳಿ ಪೇಪರ್ ಮಿಲ್ ಬಳಿ ಘಟನೆ ನಡೆದೆ. ಸದ್ಯ ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿಯೂ ಗಂಭೀರ ಎಂದು ತಿಳಿದುಬಂದಿದೆ.

mysuru

ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತಿದ್ದ ಬಸ್‌ ಗೆ ಢಿಕ್ಕಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಪೋಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಬಸ್‌ ಚಅಲಕನನ್ನು ವಶಕ್ಕೆ ಪಡೆದಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English