ವಿದ್ಯಾರ್ಥಿಗಳ ಪಾಲಿಗೆ ಹೊಸ ಆಶಾಕಿರಣ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್

11:17 PM, Saturday, November 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

shakthi advanced learning ಮಂಗಳೂರು: ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನವರು ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನುಆರಂಭಿಸುತ್ತಿದ್ದೇವೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು, ಸಂಶೋಧನಾತ್ಮಕ ನಿಲುವಿನೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಮಾತ್ರವಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒತ್ತಡಇಲ್ಲದೆ ಎದುರಿಸುವಂತಾಗಲು ಎಸ್.ಎ.ಎಲ್ ಪೂರ್ಣ ಸಹಕರಿಸುತ್ತದೆ.

ಶಾಲಾ ಹಂತದಲ್ಲೇ ಅವರನ್ನುಎನ್.ಎಸ್.ಒ, ಡಿ.ಎಂ.ಬಿ, ಐ.ಇ.ಒ, ಐ.ಜಿ.ಕೆ.ಒ, ಎನ್.ಐ.ಎಂ.ಒ, ಎನ್.ಡಿ.ಎ, ಕೆ.ಎ.ಪಿ.ವೈ ಮೊದಲಾದ ಪರೀಕ್ಷೆಗಳನ್ನು ಸಮರ್ಥವಾಗಿಎದುರಿಸಲು ತರಬೇತಿ ನೀಡಲಾಗುತ್ತದೆ. ಇದು ಮುಂದಕ್ಕೆಐ.ಎ.ಎಸ್, ಐ.ಪಿ.ಎಸ್, ಐ.ಆರ್.ಎಸ್, ಕೆ.ಎ.ಎಸ್ ಮೊದಲಾದ ಪ್ರತಿಷ್ಠಿತ ಪರೀಕ್ಷೆಗಳನ್ನು ಎದುರಿಸಲುಇದು ಮೊದಲ ಸೋಪಾನ ಆಗಬಲ್ಲದು.

ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಅವರ ಶಾಲಾ ಪರೀಕ್ಷೆಗಳಿಗೆ ಅಡ್ಡಿ ಬಾರದಂತೆ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆಯಾವುದೇತೊಂದರೆಯಾಗದಂತೆಅವರ ಪರಿಪೂರ್ಣ ವ್ಯಕ್ತಿತ್ವರೂಪಿಸುವತ್ತ ಗಮನ ಕೊಡಲಾಗುತ್ತದೆ. ಒತ್ತಡ ಇಲ್ಲದ ರೀತಿಯಲ್ಲಿಇಲ್ಲಿ ಕಲಿಕೆಗೆ ಆಸ್ಪದ ಮಾಡಿಕೊಡಲಾಗುವುದು.

ಮಕ್ಕಳ ಸೂಪ್ತ ಪ್ರತಿಭೆ ಬೆಳಕಿಗೆ ಬರಲುಎಲ್ಲಾರೀತಿಯ ಅವಕಾಶಗಳನ್ನು ಹಾಗೂ ಸೂಕ್ತ ಮಾರ್ಗದರ್ಶನವನ್ನು ನೀಡಲಾಗುವುದು. ಶಾಲಾ ಹಂತದಲ್ಲೇ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ನೀಡಲಾಗುವುದು. ವೈದ್ಯಕೀಯ, ಇಂಜಿನಿಯರಿಂಗ್, ವ್ಯವಹಾರಕ್ಷೇತ್ರ, ಬ್ಯಾಂಕಿಂಗ್‌ಕ್ಷೇತ್ರ, ಸ್ವದ್ಯೋಗ, ಶಿಕ್ಷಣ ಕ್ಷೇತ್ರರಕ್ಷಣಾಕ್ಷೇತ್ರ, ಕೃಷಿ ಹೀಗೆ ಬೇರೆ ಬೇರೆ ವಲಯಗಳಲ್ಲಿನ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಆ ಕ್ಷೇತ್ರಗಳ ಪರಿಚಯ, ಉದ್ಯೋಗಾವಕಾಶಗಳು ಹಾಗೂ ಆ ಕ್ಷೇತ್ರಗಳಿಗೆ ಪ್ರವೇಶದ ಬಗ್ಗೆ ಪೂರ್ಣ ಮಾಹಿತಿಒದಗಿಸಲಾಗುವುದು. ಇದರಿಂದತಮ್ಮ ಭವಿಷ್ಯದ ಸ್ಪಷ್ಟಕಲ್ಪನೆ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದು.

ಭಾಷಾ ಮತ್ತು ಸಂವಹನದ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ಒಡೆತನ ಸಂಪಾದಿಸುವಂತಾಗಲು ಇಂಗ್ಲೀಷ್, ಹಿಂದಿ, ಕನ್ನಡ ಭಾಷೆಗಳ ವಿವಿಧ ಪರೀಕ್ಷೆಗಳಿಗೆ ಅವರನ್ನು ಅಣಿಗೊಳಿಸಲಾಗುವುದು. ಅವರಿಗೆ ನಿರಂತರ ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ, ಭಾಷಣ ಮತ್ತು ಸಂವಹನ ಕಲೆಯತರಬೇತಿ, ಸಂದರ್ಶನಎದುರಿಸುವ ಬಗ್ಗೆ ತರಬೇತಿ, ಚರ್ಚಾಕೂಟಗಳಲ್ಲಿ ಭಾಗವಹಿಸುವ ಬಗ್ಗೆ ತರಬೇತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಉಜ್ವಲ ಭವಿಷ್ಯವೇ ಎಸ್‌ಎಎಲ್ ನ ಸ್ಪಷ್ಟಉದ್ದೇಶ. ಓರ್ವ ಸಾಮಾನ್ಯ ವಿದ್ಯಾರ್ಥಿಯನ್ನುಅಸಾಮಾನ್ಯನನ್ನಾಗಿ ಮಾಡುವಗುರಿ ನಮ್ಮದು.

ನೇರಪ್ರಸಾರ
ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ಇದರ ಉದ್ಘಾಟನಾ ಸಮಾರಂಭದ ನೇರ ಪ್ರಸಾರವು ಮೆಗಾ ಮೀಡಿಯಾ ನ್ಯೂಸ್ ನಲ್ಲಿ ಸೋಮವಾರ ಬೆಳಿಗ್ಗೆ 10 ರಿಂದ ಮೂಡಿಬರಲಿದೆ

ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಗಳನ್ನ ಬಳಸಿ

ವೆಬ್ ಸೈಟ್

ಯೌಟ್ಯೂಬ್

ಫೇಸ್ಬುಕ್ ಪೇಜ್

ಟ್ವಿಟರ್ 

shakthi advanced learning

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English