ಮಾಜಿ ಮೇಯರ್ ಕೆ.ಅಶ್ರಫ್ ಸ್ವತಂತ್ರ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣಾ ಕಣದಲ್ಲಿ

4:41 PM, Monday, November 11th, 2019
Share
1 Star2 Stars3 Stars4 Stars5 Stars
(No Ratings Yet)
Loading...

ashrafಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಅಶ್ರಫ್‌ ಅವರು ಈ ಬಾರಿ ಪಕ್ಷೇತರರಾಗಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಾಜಿ ಮೇಯರ್‌ ಕೆ. ಅಶ್ರಫ್‌ ಅವರು ಪೋರ್ಟ್‌ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ನಾಗರಿಕರು ಯಾವುದೇ ಸಮಸ್ಯೆಗಳನ್ನು ಅಶ್ರಫ್ ಅವರ ಬಳಿ ತೆಗೆದುಕೊಂಡು ಹೋದರೆ ತಕ್ಷಣ ಸ್ಪಂದಿಸುತ್ತಿದ್ದರು. ಆದ್ದರಿಂದ ಇವತ್ತಿಗೂ ಕೂಡ ಅಶ್ರಫ್ ಹೆಸರು ಹೆಸರು ಹೇಳಿದರ ಮಾಜಿ ಮೇಯರ್ ಎಂದು ಎಲ್ಲರೂ ಹೇಳುತ್ತಾರೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಂಗಳೂರಿನಲ್ಲಿ ಆಗಿ ಹೋದ ಮೇಯರ್ ಗಳಲ್ಲಿ ಕೆಲವೇ ಕೆಲವು ಮಂದಿಯನ್ನು ಮಾತ್ರ ಜನರು ನೆನಪಿಟ್ಟುಕೊಂಡಿದ್ದರೆ, ಅದರಲ್ಲಿ ಅಶ್ರಫ್ ಪ್ರಮುಖರು.

ಕಾಂಗ್ರೆಸ್ ಪಕ್ಷದಿಂದ ಗೆದ್ದು ಮೇಯರ್ ಆಗಿದ್ದ ಅಶ್ರಫ್ ಅವರು ಹಳೆ ಬಂದರು ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಿದ್ದರು. ಅಶ್ರಫ್ ಮೇಯರ್ ಆಗಿದ್ದಾಗ ಮಹಾನಗರಪಾಲಿಕೆಯ ಆಡಳಿತಕ್ಕೂ ಚುರುಕು ಮುಟ್ಟಿಸಿದ್ದರು.

ಮಂಗಳೂರಿನ ಮೇಯರ್ ಆಗುವವರು ಆ ಅನುದಾನವನ್ನು ತಮ್ಮ ವಾರ್ಡಿನ ಅಭಿವೃದ್ಧಿಗಾಗಿಯೇ ವಿನಿಯೋಗಿಸುತ್ತಾರೆ. ಮೇಯರ್ ಆಗಿಯೂ ತಮ್ಮ ವಾರ್ಡಿಗೆ ಏನೂ ಮಾಡಿಲ್ಲ ಎನ್ನುವ ಆರೋಪ ಬರಬಾರದಲ್ಲ, ಆ ಕಾರಣಕ್ಕೆ. ಆದರೆ ಅಶ್ರಫ್ ಆ ನಿಟ್ಟಿನಲ್ಲಿ ಉಳಿದ ಎಲ್ಲಾ ಮೇಯರ್ ಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಯಾಕೆಂದರೆ ಅವರು ಮೇಯರ್ ಆಗಿದಷ್ಟು ದಿನ ತಮ್ಮ ವಾರ್ಡಿಗಿಂತ ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಮೇಯರ್ ಫಂಡ್ ಖರ್ಚು ಮಾಡಿದ್ದೇ ಜಾಸ್ತಿ.

ಮಂಗಳೂರು ನಗರ ಪಾಲಿಕೆಯ ಯಾವುದೋ ವಾರ್ಡುಗಳಲ್ಲಿರುವ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು ಹರಿದು ಬರುವ ಪೈಪುಗಳನ್ನು, ನೀರಿನ ಟಾಂಕಿಗಳನ್ನು ಹಾಕಿಸಿ ಮಕ್ಕಳಿಗೆ, ಶಿಕ್ಷಕರಿಗೆ ನೆರವಾಗಿದ್ದರು ಅಶ್ರಫ್.

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಶ್ರಫ್ ಅವರು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ವಿನಾಕಾರಣ ಆರೋಪಿಸಿದರು ಎಂದು ನೊಂದು ರಾಜಿನಾಮೆ ನೀಡಿದ್ದರು. ಆದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿ ಪ್ರಚಾರ ನಡೆಸಿದ್ದೇನೆ ಎನ್ನುತ್ತಾರೆ ಅಶ್ರಫ್.

ಆಗ ಮಂಗಳೂರು ದಕ್ಷಿಣದಿಂದ ಟಿಕೆಟ್‌ಗೆ ಐವನ್ ಡಿಸೋಜಾ ಅವರನ್ನು ಬೆಂಬಲಿಸಿದ್ದು ನನ್ನನ್ನು ಪಕ್ಷ ವಿರೋಧಿ ಎಂದು ಜೆ.ಆರ್. ಲೋಬೋ ಅವರು ಬಿಂಬಿಸುವಂತೆ ಆಯಿತು. ನಿಜವಾಗಿ ನಾನು ಲೋಬೋ ಅವರ ಗೆಲುವಿಗೆ ಬಂದರು ಪ್ರದೇಶದಲ್ಲಿ ಶ್ರಮಿಸಿದ್ದೆ. ಆದರೂ ನನ್ನ ಮೇಲೆ ಅವರಿಗೆ ವಿಶ್ವಾಸ ಇರಲಿಲ್ಲ. ಇದರಿಂದಾಗಿ ನಾನು ಕಾಂಗ್ರೆಸ್ ತ್ಯಜಿಸುವಂತಾಯಿತು ಎನ್ನುತ್ತಾರೆ ಅಶ್ರಫ್.

ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಮಾತುಕೊಟ್ಟು ನಂತರ ಕೈಕೊಟ್ಟಿರುವುದು ಅಶ್ರಫ್ ಕೋಪಕ್ಕೆ ಕಾರಣವಂತೆ. ಅಷ್ಟೇ ಅಲ್ಲ, ಪಕ್ಷ ಸಂಘಟನೆಗೆ ಮುಖಂಡರು ಆಸ್ಪದ ನೀಡುತ್ತಿಲ್ಲ. ಎಲ್ಲ ಮುಖಂಡರು ನಾಯಕರು ಬಂದಾಗ ಫೋಸು ಕೊಡುವುದು ಬಿಟ್ಟರೆ ಪಕ್ಷದ ಕೆಲಸ ಮಾಡುವವರಿಲ್ಲ. ನಾನು ಸ್ಪರ್ಧಿಸಿದಾಗಲೂ ಯಾರೊಬ್ಬ ನಾಯಕರೂ ಪ್ರಚಾರಕ್ಕೆ ಬರಲಿಲ್ಲ. ಈ ಎಲ್ಲ ಕಾರಣಗಳಿಂದ ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ಬಿಡಲು ಕಾರಣ ಎಂದು ಅಶ್ರಫ್ ತಿಳಿಸಿದ್ದಾರೆ.

ಪೋರ್ಟ್ ವಾರ್ಡ್ ಅಶ್ರಫ್ ಅವರಿಗೆ ಪರಿಚಿತವಾದ ಪ್ರದೇಶವಾಗಿದ್ದು, ಹಾಲಿ ಕಾರ್ಪೋರೇಟರಿಗೆ ಜಿದ್ದಾಜಿದ್ದಾನ ಸ್ಪರ್ಧೆ ನೀಡುವ ಸಾಧ್ಯತೆ ಇದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English