ಬರ್ದಿಯಾ : ಭಾರತವನ್ನು ದೂರ ಸರಿಸಿ ನೇಪಾಳದ ದೊಡ್ಡಣ್ಣ ಎನಿಸಿಕೊಳ್ಳಲು ಹವಣಿಸುತ್ತಿದ್ದ ಚೀನಾದ ವಿರುದ್ಧ ನೇಪಾಳದಲ್ಲಿ ತೀವ್ರ ಪ್ರತಿಭಟನೆಗಳು ಶುರುವಾಗಿವೆ.
ನೇಪಾಳದ ಭೂ ಪ್ರದೇಶಗಳನ್ನು ಮೆಲ್ಲಮೆಲ್ಲಗೆ ಚೀನಾ ಆಕ್ರಮಿಸುತ್ತಿದ್ದು, ಅದರ ವಿಸ್ತರಣಾವಾದದ ವಿರುದ್ಧ ನೇಪಾಳಿಗರು ಸಿಡಿದೆದ್ದಿದ್ದಾರೆ. ಸೋಮವಾರ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿದಿದ್ದಾರೆ.
ಚೀನಾ ವಿರೋಧಿ ಪ್ಲಕಾರ್ಡ್ಗಳು, ಬ್ಯಾನರ್ಗಳನ್ನು ಹೊಂದಿದ್ದ ಪ್ರತಿಭಟನಾಕಾರರು ಚೀನಾ ವಿರೋಧಿ ಘೋಷಣೆಗಳು ಕೂಗಿದ್ದಾರೆ. “ಗೋ ಬ್ಯಾಕ್ ಚೀನಾ, ನಮ್ಮ ಭೂ ಭಾಗವನ್ನು ವಾಪಸ್ ನೀಡು” ಎಂದು ಪ್ರತಿಭಟನೆ ವೇಳೆ ಕೂಗಿದ್ದಾರೆ.
ಇತ್ತೀಚೆಗೆ ನೇಪಾಳದ ಸರ್ವೇ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ನೇಪಾಳದ 36 ಹೆಕ್ಟೇರ್ ಭೂಮಿ ಚೀನಾ ವಶದಲ್ಲಿರುವುದು ಬಹಿರಂಗವಾಗಿದೆ. ಹುಮ್ಲಾ ಜಿಲ್ಲೆಯಲ್ಲಿ ಮತ್ತು ಕರ್ನಾಲಿ ಜಿಲ್ಲೆಯಲ್ಲಿ ಅತಿಕ್ರಮ ನಡೆದಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ನೇಪಾಳವು ಚೀನಾಕ್ಕೆ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ನೇಪಾಳಿಗರಿಗೆ ಇದೀಗ ಅರಿವಾಗಿದ್ದು ಪ್ರತಿಭಟನೆಗೆ ಇಳಿದಿದ್ದಾರೆ.
Click this button or press Ctrl+G to toggle between Kannada and English