ಕಾರ್ಕಳ : ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಚನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಗ್ರೀನ್ ಸಿಗ್ನಲ್

10:39 AM, Wednesday, November 13th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Karkala

ಕಾರ್ಕಳ : ಕಾರ್ಕಳಕ್ಕೆ ಶೀಘ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಚನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಗ್ರೀನ್ ಸಿಗ್ನಲ್ ನೀಡಿದ್ದು, ಜತೆಗೆ ಎರಡು ಹೊಸ ತುರ್ತು ಚಿಕಿತ್ಸಾ ವಾಹನ ಹಾಗೂ ಮೂರು ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ತಲಾ 10 ಲಕ್ಷ ರೂ. ನೀಡುವ ಕುರಿತು ಘೋಷಿಸಿದ್ದಾರೆ.

ಅವರು ಮಂಗಳವಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲೆ ಹಾಗೂ ಇಂಜಿನಿಯರಿಂಗ್ ಉಪವಿಭಾಗ ಮಂಗಳೂರು ಇದರ 100 ಹಾಸಿಗೆಗಳ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ 8.5 ಕೋಟಿ ರೂ. ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಸಚಿವರು ಸರಕಾರಿ ಆಸ್ಪತ್ರೆಗಳ ಸುಧಾರಣೆಗಾಗಿ ಮಂತ್ರಿಗಳು ಪ್ರವಾಸಿ ಬಂಗಲೆ, ರೆಸಾರ್ಟ್ ಗಳಲ್ಲಿ ವ್ತಾಸ್ತವ್ಯ ಹೂಡದೆ ಸರಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯವಿದ್ದು ಆಸ್ಪತ್ರೆಗಳ ಸ್ಥಿತಿಗತಿ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು.

ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಾಗಿ ಆಸ್ಪತ್ರೆ ವಠಾರದಲ್ಲಿ ಸಿಸಿ ಕ್ಯಾಮರಾ, ಪೊಲೀಸ್ ಸಿಬ್ಬಂದಿಗಳನ್ನು, ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಸ್ವಚ್ಚತೆ ವಿಚಾರದಲ್ಲಿ ಯಾವುದೇ ದೂರುಗಳು ಬಂದಲ್ಲಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗುತ್ತಿದ್ದು ಇದೀಗ ಯಡಿಯೂರಪ್ಪ ನೇತ್ರತ್ವದ ಸರಕಾರದಲ್ಲಿ ಯಾವುದೇ ಅಡೆತಡೆಯಿಲ್ಲದೇ ನೇರ ನೇಮಕಾತಿ ನಡೆಸಲಾಗುವುದು. ಅದರಂತೆ ಯಾವುದೇ ವೈದ್ಯ ಖಾಸಗಿ ಆಸ್ಪತ್ರೆ ಬಿಟ್ಟು ಸರಕಾರಿ ಆಸ್ಪತ್ರೆಗೆ ಬರುವುದಾದರೆ ಖಾಸಗಿ ಆಸ್ಪತ್ರೆಯಲ್ಲಿ ನೀಡುವಷ್ಟೇ ವೇತನ ನಮ್ಮ ಸರಕಾರ ನೀಡಲಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪಿ.ಕೆ.ಮಲ್ಯ, ಗುತ್ತಿಗೆದಾರ ಯತೀಶ್ ಕುಮಾರ್, ಡಿ ಗ್ರೂಪ್ ನೌಕರ ಸುಧಾಕರ, ಹಿರಿಯ ಶುಶ್ರೂಷಕಿ ಗೋಪಿ ಅವರನ್ನು ಅಭಿನಂದಿಸಲಾಯಿತು.

ಯಾರೋ ಮಾಡಿದ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ಜನರ ದಿಕ್ಕು ತಪ್ಪಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಪಾರಂಪರಿಕ ಗುಣ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ರಾಜಕೀಯದ ಹೆಸರಿನಲ್ಲಿ ಅಭಿವೃದ್ಧಿ ಸಾಧನೆಯ ನೈಜ ಹರಿಕಾರರನ್ನು ಕತ್ತಲೆಯಲ್ಲಿಡುವುದು ರಾಜಧರ್ಮವಲ್ಲ. ಇದು ಇಲ್ಲಿನ ಶಾಸಕರು ಹಾಗೂ ಬಿಜೆಪಿ ನಾಯಕರಿಗೆ ಭೂಷಣವಲ್ಲ ಎಂದು ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನಚಂದ್ರ ಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English